ನಾಳೆಯಿಂದ IPL​ನ 2nd ಇನ್ನಿಂಗ್ಸ್ ಶುರು.. ಪಾಯಿಂಟ್ಸ್​ ಟೇಬಲ್​​ನಲ್ಲಿ ಟೈಟನ್ಸ್, ರಾಯಲ್ಸ್ ದರ್ಬಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾಳೆಯಿಂದ ಐಪಿಎಲ್​​ನ ಎರಡನೇ ಇನ್ನಿಂಗ್ಸ್​​ ಆರಂಭವಾಗಲಿದೆ. 10 ತಂಡಗಳ ಪೈಕಿ 6 ತಂಡಗಳು ಟ್ರೋಫಿಯ ಸಮೀಪಕ್ಕೆ ಬರುತ್ತಿದ್ದು, ಎಲ್ಲಾ ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿ ಎಂಬ ಹೋರಾಟ ಮಾಡಬೇಕಿದೆ.

ಐಪಿಎಲ್ ಪಾಯಿಂಟ್ಸ್ ಟೇಬಲ್ ಪ್ರಕಾರ, 10 ತಂಡಗಳಲ್ಲಿ ನಾಲ್ಕು ತಂಡಗಳು ಪ್ಲೇ-ಆಫ್​ಗೆ ಅರ್ಹತೆ ಪಡೆಯಲಿವೆ. ಅವುಗಳಲ್ಲಿ ಗುಜರಾತ್ ಟೈಟನ್ಸ್ 11 ಪಂದ್ಯಗಳನ್ನ ಆಡಿ, 8 ರಲ್ಲಿ ಗೆದ್ದು, 16 ಅಂಕಗಳೊಂದಿಗೆ ನೆಟ್​ ರನ್​ ರೇಟ್ ಆಧಾರದ ಮೇಲೆ ಮೊದಲ ಸ್ಥಾನದಲ್ಲಿದೆ. ಆರ್​ಸಿಬಿ ಕೂಡ 11 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು ಎರಡನೇ ಸ್ಥಾನವನ್ನು ಅಲಂಕರಿಸಿದೆ.

11 ರಲ್ಲಿ 7 ಪಂದ್ಯ ಗೆದ್ದಿರುವ ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 7 ಮ್ಯಾಚ್ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, 11 ಪಂದ್ಯಗಳಲ್ಲಿ 6 ಮ್ಯಾಚ್ ಗೆದ್ದು ಐದನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!