ಹೊಸದಿಗಂತ ರಾಯಚೂರು :
ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಯವರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವವನ್ನು ಇದೇ ಆಗಸ್ಟ್ 8 ರಿಂದ ಆಗಸ್ಟ್.14ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಮಂತ್ರಾಲಯ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.೮ರ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಲಾಗುವದು ನಂತರ ವಿಶೇಷ ಪೂಜೆ, ಪುಷ್ಪಾಲಂಕಾರ ಜರಗುತ್ತದೆ. ಸಂಜೆ ಧ್ವಜಾರೋಹಣ, ಗೋಪೂಜೆ, ಅಶ್ವಪೂಜೆ, ಧಾನ್ಯ ಪೂಜೆಗಳು ಜರಗುತ್ತವೆ. ಮಹಾರಥೋತ್ಸವ, ಸ್ವರ್ಣ ರಥೋತ್ಸವ ಜರಗುತ್ತವೆ ಎಂದರು.
ಆ.9 ರಂದು ಬೆಂಗಳೂರಿನ ಉದ್ಯಮಿ ಪ್ರಕಾಶ ಶೆಟ್ಟರು ನೂತನ ಪುಷ್ಕರಣಿಯನ್ನು ಲೋಕಾರ್ಪಣೆ ಮಾಡಲಾಗುವುದು, ತೆಪ್ಪೋತ್ಸವ, ರಥೋತ್ಸವ ಜರಗುವುದು. ಆರಾಧನೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲಬೃಂದಾವನಕ್ಕೆ ಶ್ರೀನಿವಾಸದೇವರ ಶೇಷವಸ್ತ್ರವು ಆ.೯ ರಂದು ಸಮರ್ಪಿಸಲಾಗುತ್ತದೆ. ಈ ಟಿಟಿಡಿಬಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪಾದಪೂಜೆ ಶ್ರೀರಂಗದ ವಸ್ತçವೂ ಆಗಮಿಸಲಿದೆ. ಕಂಚಿ ವರದರಾಜರ ವಸ್ತ್ರವು ಆಗಮಿಸಲಿದೆ ವಾದ್ಯ, ಮೆರವಣಿಗೆ ಮೂಲಕ ಬರಮಾಡಿಕೊಂಡು ರಾಯರಿಗೆ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಆ.10ರಂದು ಪ್ರತಸಕ್ತ ಸಾಲಿನ ಶ್ರೀಮಠದ ಪ್ರತಿಷ್ಟಿತ ಪ್ರಶಸ್ತಿಯಾದ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿಯನ್ನು ಕಾಶಿವಿಶ್ವನಾಥ ದೇವಸ್ಥಾನದ ಟ್ರಷ್ಟಿಗಳು ಹಾಗೂ ವಿದ್ವಾಂಸರಾದ ರಾಜಾರಾಂ ಶುಕ್ಲಾ ಅವರಿ ನೀಡಿ ಗೌರವಿಸಲಾಗುತ್ತಿದೆ. ಗುರು ಅನುಗ್ರಹ ಪ್ರಶಸ್ತಿಯನ್ನು ತಮಿಳುನಾಡಿನ ಜಿ.ಆರ್.ವಿಠಲ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಆ.೧೧ ರಂದು ಕನ್ನಡ, ಸಂಸ್ಕೃತ, ಹಿಂದಿ, ತೆಲುಗು ಭಾಷೆಗಳಲ್ಲಿ ಸಂಶೋಧನೆ ಮಾಡಿ ಮುದ್ರಿಸಲಾದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಆ.೧೨ ರಂದು ಉತ್ತರಾರಾಧನ ಮಹೋತ್ಸವದಂದು ಹೈದರಾಬಾದಿನ ತಿರುಮಲರಡ್ಡಿ ಎನ್ನುವವರು ಅರ್ಪಿಸಿದ ಮೂಲಬೃಂದಾವನಕ್ಕೆ ಸ್ವರ್ಣ ಲೇಪಿತ ಕವಚ ಲೋಕಾರ್ಪಣೆ ಮಾಡೊಲಾಗುವುದು ಎಂದು ತಿಳಿಸಿದರು.
ನಂಜನಗೂಡಿನ ಮಠದಲ್ಲಿ ಸೇರಿದಂತೆ ಶಾಖಾ ಮಠಗಳಲ್ಲಿಯೂ ಆರಾಧನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಈ ಕಾರ್ಯಕ್ರದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಡಾರ್ಮಿಟರಿ ಹಾಲ್, ಲಾಕರ್ ವ್ಯವಸ್ಥೆಯನ್ನು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಮೂಲಬೃಂದಾವನದ ಮುಂದಿನ ಶಿಲಾಸ್ತಂಭಗಳಿಗೆ ಸುವರ್ಣ ಲೇಪಿತ ಕವಚಗಳನ್ನು ದಕ್ಷಿಣ ಭಾಗಕ್ಕೆ ಅಳವಡಿಸುವಿಕೆಯನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು. ಮಂತ್ರಾಲಯಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು ಇವರಿಗೆ ರಾಯರ ದರ್ಶನಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ರಾಯೋಗಿಕವಾಗಿ ಮೂರು ಮಾರ್ಗಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಮಾರ್ಗಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ಸಾಗಿ ಬರುವಂತೆ ಕಂಪಾರ್ಟ್ಮೆಂಟ್ ಗಳ ವ್ಯವಸ್ಥೆ ಹಾಗೂ ಮೇಲು ಸೇತುವೆಯ ವ್ಯವಸ್ಥೆಯನ್ನು ಮಾಡಲಾಗಿದೆ. ತುಂಗಭದ್ರಾ ನದಿಯಲ್ಲಿ ಅಧಿಕ ನೀರು ಹರಿಯುತ್ತಿರುವುದರಿಂದ ಭಕ್ತರ ರಕ್ಷಣೆಗಾಗಿ ಸ್ನಾನ ಘಟ್ಟಗಳನ್ನು, ಸಾಮೂಹಿಕ ಶೌಚಾಲಯಗಳನ್ನು ವ್ಯವಸ್ಥೆಮಾಡಲಾಗಿದೆ, ಆಂದ್ರಪ್ರದೇಶದ ಪೊಲೀಸರು ಮುಂಜಾಗ್ರತಾ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದರು.
ಮಂತ್ರಾಲಯದಲ್ಲಿನ ಒಳ ಚರಂಡಿ ವ್ಯವಸ್ಥೆ ಬಹಳ ಹಳೆಯದಾಗಿದ್ದು ನೂತನವಾಗಿ ಒಳ ಚರಂಡಿ ವ್ಯವಸ್ಥೆಯನ್ನು ಟಾಟಾ ಸಮೂಹ ಸಂಸ್ತೆಯು ಸ್ವಂತ ೧೫ ಕೋಟಿ ವ್ಯಚ್ಛದಲ್ಲಿ ಸಂಪೂರ್ಣವಾಗಿ ನಿರ್ಮಿಸಿಕೊಡುತ್ತಿದೆ. ಒಳ ಚರಂಡಿ ತ್ಯಾಜ್ಯವನ್ನು ಶುದ್ಧೀಕರಿಸಿ ಮರು ಉಪಯೋಗಕ್ಕೆ ಬರುವ ರೀತಿಯಲ್ಲಿ ಯೋಜನೆಯನ್ನು ಟಾಟಾ ಸಂಸ್ಥೆ ರೂಪಿಸಿದೆ.
ಎರಡು ಕೋಟಿಗೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರ ಸಾಮೂಹಿಕ ವಸತಿಗಾಗಿ ಸಂಸ್ಕೃತ ಪಾಠ ಶಾಲೆ ಸೇರಿದಂತೆ ವಿವಿಧ ಶಾಲೆಗಳು ಸೇರಿದಂತೆ ವಿವಿದೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೇವಾಂಗರು, ವೃದ್ಧರು, ದಿವ್ಯಾಂಗರು ಸೇರಿದಂತೆ ವಿವಿಐಪಿಗಳಿಗೆ ರಾಯರ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ವಿಶ್ವದ ಏಳು ಶಾಖಾ ಮಠಗಳಲ್ಲಿ ಆರಾಧನಾ ಕಾರ್ಯಕ್ರಮಗಳು ಜರುಗಲಿವೆ.