ಹೊಸದಿಗಂತ ಡಿಜಿಟಲ್ ಡೆಸ್ಕ್:
1998ರಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷಗಳ ಬಳಿಕ ಕೋಲಾರದ ಗಲ್ ಪೇಟೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ನಗರದ ಕೋಟೆ ಬಡಾವಣೆಯ ನಿವಾಸಿ ಪ್ಯಾರೇಜಾನ್ ಬಂಧಿತ ಆರೋಪಿ. ಈತ 1998ರಲ್ಲಿ ಜಗಳ ಮಾಡಿಕೊಂಡಿದ್ದ. ಈತನ ವಿರುದ್ಧ ಗಲ್ ಪೇಟೆ ಪೊಲೀಸರು ಹಲ್ಲೆ, ಪ್ರಾಣ ಬೆದರಿಕೆ, ನಷ್ಟ ಉಂಟು ಮಾಡಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೀಗ ಸೂಕ್ತ ಮಾಹಿತಿ ಆಧರಿಸಿ ಆರೋಪಿಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೇದೆ ಮಂಜುನಾಥ್ ಅವರಿಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.