ಹೊಸದಿಗಂತ ವರದಿ ವಿಜಯಪುರ:
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಬೈಪಾಸ್ ಬಳಿ ಬಂಧಿಸಿರುವ ಘಟನೆ ನಡೆದಿದೆ.
ಮಾಳಪ್ಪ ಭೀಮಣ್ಣ ಜಂಬಗಿ (22) ಬಂಧಿತ ಆರೋಪಿ. ಈತ ಜಿಲ್ಲೆಯ ಸಿಂದಗಿ, ಇಂಡಿ ಸೇರಿದಂತೆ ಇತರೆಡೆ ಬೈಕ್ ಕಳ್ಳತನ ಮಾಡುತ್ತಿದ್ದ.
ಬೈಕ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದಿದ್ದು, ಆರೋಪಿಯಿಂದ 1.65 ಲಕ್ಷ ರೂಪಾಯಿ ಮೌಲ್ಯದ 4 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.