ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸ್ಟಾರ್ಗಳು ಕೂಡ ಸಿನಿಮಾ ನೋಡಿ ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಇದೀಗ ಪ್ರೀಮಿಯರ್ ಶೋನಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಸುಪ್ರೀತಾ ಶೆಟ್ಟಿ ಸಿನಿಮಾ ನೋಡಿದ್ದಾರೆ.
ಸಿನಿಮಾ ನೋಡಿದ ದಂಪತಿ ಸಿನಿಮಾ ಏನೋ ಸಖತ್ ಆಗಿದೆ, ಆದರೆ ನಮ್ಮ ಮಕ್ಕಳನ್ನು ಹಾಸ್ಟೆಲ್ಗೆ ಕಳಿಸೋದಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ಬಗ್ಗೆ ಹಾಡಿ ಹೊಗಳಿರೋ ದಂಪತಿ, 500 ಜನ ಹುಡುಗರನ್ನು ಸೇರಿಸಿ ಶೂಟ್ ಮಾಡಿದ್ದು, ಸಿನಿಮಾಟೋಗ್ರಫಿ ತುಂಬಾ ಚೆನ್ನಾಗಿದೆ, ಸಿನಿಮಾ 100 ಡೇಸ್ ಗ್ಯಾರೆಂಟಿ ಎಂದಿದ್ದಾರೆ.