ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಸಂಸಾರ ಹಾಳಾಗೋದಕ್ಕೆ ನಟಿ ಪ್ರೀತಿ ಝಿಂಟಾ ಕಾರಣ, ನನ್ನ ಪತಿ ಜೊತೆ ಅವರು ಕ್ಲೋಸ್ ಆಗಿದ್ದೇ ನಮ್ಮ ಡಿವೋರ್ಸ್‌ಗೆ ಕಾರಣ ಎಂದು ನಟಿ, ಗಾಯಕಿ ಸುಚಿತ್ರಾ ಹೇಳಿದ್ದಾರೆ.
ಬಾಲಿವುಡ್ ನಿರ್ದೇಶಕ ಶೇಖರ್ ಕಪೂರ್ ಹಾಗೂ ಸುಚಿತ್ರಾ ಪ್ರೀತಿಸಿ ಮದುವೆಯಾದವರು, ಎಂಟು ವರ್ಷದ ದಾಂಪದ್ಯ ಜೀವನವನ್ನು ಡಿವೋರ್ಸ್ ಮೂಲಕ ಕೊನೆಗಾಣಿಸಿದ್ದರು.
ಡಿವೋರ್ಸ್ ಆಗಿ ವರ್ಷಗಳೇ ಕಳೆದರೂ ಸುಚಿತ್ರಾ ತಮ್ಮ ಜೀವನದಲ್ಲಿ ಆದ ಕಹಿ ಘಟನೆಯನ್ನು ಮರೆತಿಲ್ಲ. ಪ್ರೀತಿ ಝಿಂಟಾ ನನ್ನ ಪತಿ ಜೊತೆ ಕ್ಲೋಸ್ ಆಗಿದ್ದರು. ಇದರಿಂದಾಗಿ ನನ್ನ ಹಾಗೂ ನನ್ನ ಪತಿ ಮಧ್ಯೆ ಜಗಳಗಳಾಗಿತ್ತು. ಪ್ರೀತಿಯನ್ನು ಎಂದಿಗೂ ಕ್ಷಮಿಸೋದಿಲ್ಲ ಎಂದಿದ್ದಾರೆ.
ಈ ಹಿಂದೆಯೂ ಪ್ರೀತಿ ಬಗ್ಗೆ ಸುಚಿತ್ರಾ ದೂರಿದ್ದು, ಪ್ರೀತಿ ಝಿಂಟಾ ಈ ಬಗ್ಗೆ ಮೌನ ಮುರಿದಿದ್ದರು. ಎಲ್ಲವೂ ಸುಳ್ಳು , ನಿಮ್ಮ ತಲೆ ಸರಿ ಇಲ್ಲ ಎಂದು ಗಾಸಿಪ್ ತಳ್ಳಿ ಹಾಕಿದ್ದರು.