ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಇಂದೂ ಸಹ ಹಲವೆಡೆ ಕಳಪೆ ಗಾಳಿ ಗುಣಮಟ್ಟ ಸೂಚ್ಯಂಕ ದಾಖಲಾಗಿದ್ದು, ವಿಶೇಷವಾಗಿ ಉಡುಪಿಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ಬೆಂಗಳೂರಿನ ಗಾಳಿ ಗುಣಮಟ್ಟ ಸೂಚ್ಯಂಕ(AQI) ಇಂದು 175ಕ್ಕೆ ದಾಖಲಾಗಿದೆ. ಇದೇ ವೇಳೆ ಉಡುಪಿಯಲ್ಲಿ 181ರ ಮಟ್ಟ ತಲುಪಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಅನಾರೋಗ್ಯಕರವೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಬಳ್ಳಾರಿಯಲ್ಲೂ ಗಾಳಿ ಗುಣಮಟ್ಟ 178ರ ಮಟ್ಟದಲ್ಲಿದ್ದು, ಇತರ ನಗರಗಳಲ್ಲಿಯೂ ಸ್ಥಿತಿ ಸಮಾಧಾನಕರವಾಗಿಲ್ಲ.
ಇದನ್ನೂ ಓದಿ:
ಇಂದಿನ ಅಂಕಿ-ಅಂಶಗಳ ಪ್ರಕಾರ ಮಂಗಳೂರು 174, ಮೈಸೂರು 177, ಬೆಳಗಾವಿ 178, ಶಿವಮೊಗ್ಗ 174 ಮತ್ತು ಹುಬ್ಬಳ್ಳಿ 153 ಮಟ್ಟದಲ್ಲಿ ದಾಖಲಾಗಿದೆ. ಕಲಬುರ್ಗಿ ಹಾಗೂ ವಿಜಯಪುರದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ, ಅಲ್ಲಿಯೂ ಗಾಳಿ ಗುಣಮಟ್ಟ ಸಂಪೂರ್ಣ ಸುರಕ್ಷಿತ ಹಂತ ತಲುಪಿಲ್ಲ.



