ಜಾತಿ ಜನಗಣತಿ ವೈಜ್ಞಾನಿಕವಲ್ಲ ಎನ್ನುವ ಆರೋಪ ಸುಳ್ಳು: ಎಚ್‌.ಕಾಂತರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾತಿ ಜನಗಣತಿ ಸಮೀಕ್ಷೆಯನ್ನು ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ರೂಪಿಸಲಾಗಿದೆ ಎಂದು ವರದಿ ರೂಪಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜ್ ಹೇಳಿದ್ದಾರೆ.

ಸಮೀಕ್ಷೆ ನಿಖರವಾಗಿ ನಡೆದಿಲ್ಲ. ವೈಜ್ಞಾನಿಕವೂ ಅಲ್ಲ ಎಂದು ಕೆಲವರು ಆರೋಪಿಸುತ್ತಾರೆ. ಆದ್ರೆ ಈ ಸಮೀಕ್ಷೆ ಸುಪ್ರೀಂಕೋರ್ಟ್‌ನ ಮಾರ್ಗಸೂಚಿಯಂತೆ ನಡೆದಿದೆ ಹೀಗಾಗಿ ಇದು ವೈಜ್ಞಾನಿಕ ಸಮೀಕ್ಷೆ ಎಂದರು.

ವರದಿಯಲ್ಲಿ ಹೊರಗಿನವರ ಹಸ್ತಕ್ಷೇಪವಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ವರದಿ ಸಿದ್ಧಪಡಿಸುವಾಗ ಆಂತರಿಕವಾಗಿ, ಬಹಿರಂಗವಾಗಿ ಸರ್ಕಾರ ಮಾತ್ರವಲ್ಲ ಯಾರ ಕಡೆಯಿಂದಲೂ ಯಾವುದೇ ಹಸ್ತಕ್ಷೇಪ ಆಗಿಲ್ಲ ಎಂದು ಎಚ್‌.ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!