ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ನಿರಾಧಾರ: ಸಚಿವ ಎನ್‌.ಎಸ್‌. ಬೋಸರಾಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ವರ್ಷಗಳಲ್ಲಿ 1,566 ಗುತ್ತಿಗೆದಾರರ ಬಾಕಿ ಇತ್ಯರ್ಥ ಮಾಡಲಾಗಿದೆ. ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ನಿರಾಧಾರ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಹೇಳಿದ್ದಾರೆ.

ಇಲಾಖೆಯ ಆಡಳಿತದಲ್ಲಿ ಯಾರದೂ ಹಸ್ತಕ್ಷೇಪ ಇಲ್ಲ. ಕೆರೆಗಳ ಆಧುನೀಕರಣದಲ್ಲಿ ₹10 ಲಕ್ಷದವರೆಗಿನ ಕಾಮಗಾರಿಗಳಿಗೆ, ಪಿಕ್‌ಅಪ್‌ ಅಣೆಕಟ್ಟೆಗಳ ಕಾಮಗಾರಿಗಳಿಗೆ ₹15 ಲಕ್ಷದವರೆಗೆ ಪೂರ್ಣ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲ ಗುತ್ತಿಗೆದಾರರಿಗೂ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ತಾರತಮ್ಯ, ಹಸ್ತಕ್ಷೇಪ ಇಲ್ಲದೇ ಸಣ್ಣ ಗುತ್ತಿಗೆದಾರರಿಗೂ ಹಣ ನೀಡಲಾಗಿದೆ. ಹೆಚ್ಚಿನ ಹಣ ಬಾಕಿ ಇರುವ ಗುತ್ತಿಗೆದಾರರನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದೆ. 2000 ಗುತ್ತಿಗೆದಾರರಲ್ಲಿ, 639 ಗುತ್ತಿಗೆದಾರರ ಸಂಪೂರ್ಣ ಹಣವನ್ನು ಬಿಡುಗೆಡೆ ಮಾಡಲಾಗಿದೆ. 1,361 ಗುತ್ತಿಗೆದಾರರಿಗೆ ಭಾಗಶಃ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!