ಹಣದ ಹೊಳೆ ಹರಿಸೋಕೆ ಸಜ್ಜಾದ ಅಂಬಾನೀಸ್‌, ಇಂದಿನಿಂದ ಮೂರು ದಿನ ಮದುವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ ಇಂದಿನಿಂದ ಆರಂಭವಾಗಲಿದೆ.
ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ಇನ್ನೇನು ಮದುವೆಗೆ ಕೆಲವೇ ಗಂಟೆಗಳು ಬಾಕಿ ಇವೆ.

Ambani wedding guest list: Top CEOs, celebrities make a beeline for Ambani  family wedding | People - Business Standard ಇನ್ನು, ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಮದುವೆ ಮೂರು ದಿನಗಳ ಕಾಲ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳ ಇರಲಿವೆ. ಜುಲೈ 12ಕ್ಕೆ ಶುಭ ವಿವಾಹ ನಡೆಯಲಿದೆ. ಮದುವೆಗೆ ಡ್ರೆಸ್​ ಕೂಡ ಇದೆ. ಎಲ್ಲರೂ ಭಾರತೀಯ ಟ್ರೆಡಿಷನಲ್ ಡ್ರೆಸ್ ಹಾಕಿಕೊಂಡು ಬರಬೇಕು ಎಂದು ವರದಿಯಾಗಿದೆ.

Anant Ambani, Radhika Merchant's 2nd pre-wedding bash schedule

ಎರಡನೇ ದಿನ ಜುಲೈ 13ಕ್ಕೆ ‘ಶುಭ ಆಶೀರ್ವಾದ್’ ಇದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಶೈಲಿಯ ಫಾರ್ಮಲ್ ಉಡುಪುಗಳನ್ನು ಧರಿಸಬೇಕಿದೆ. ಮೂರನೇ ದಿನ ಜುಲೈ 14ಕ್ಕೆ ‘ಮಂಗಳ ಉತ್ಸವ್’ ನಡೆಯಲಿದೆ. ಇದು ಆರತಕ್ಷತೆಯಾಗಿರುತ್ತೆ. ಮೂರು ದಿನಗಳು ನಡೆಯೋ ಮದುವೆಗೆ ಕ್ರೀಡಾ ಲೋಕದ ದಿಗ್ಗಜರು, ಕ್ರಿಕೆಟರ್ಸ್​​, ಬಾಲಿವುಡ್​ ಸೆಲೆಬ್ರಿಟಿಗಳು, ದೇಶದ ಪ್ರತಿಷ್ಠಿತ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮದುವೆಗೆ ಒಟ್ಟಾರೆ ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!