ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ತಾಳ್ಮೆಯ ಆಟ, ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 190 ರನ್ ಗಳಿಸಿದ್ದು, ಎದುರಾಳಿ ಪಂಜಾಬ್ ಕಿಂಗ್ಸ್‌ಗೆ 191 ರನ್‌ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಪವರ್ ಪ್ಲೇನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ನಿಧಾನಗತಿಯ ಬ್ಯಾಟಿಂಗ್ ಶುರು ಮಾಡಿತು.
ಮೊದಲ ವಿಕೆಟ್‌ಗೆ ಸಾಲ್ಟ್, ಕೊಹ್ಲಿ ಜೋಡಿ 18 ರನ್, 2ನೇ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ 38 ರನ್, 3ನೇ ವಿಕೆಟಿಗೆ ಕೊಹ್ಲಿ-ರಜತ್ ಪಾಟಿದಾರ್ ಜೋಡಿ 27 ಎಸೆತಗಳಲ್ಲಿ ಸ್ಫೋಟಕ 40 ರನ್, 4ನೇ ವಿಕೆಟಿಗೆ ಕೊಹ್ಲಿ-ಲಿವಿಂಗ್‌ಸ್ಟೋನ್ ಜೋಡಿ 35 ರನ್ ಜೊತೆಯಾಟ ನೀಡಿತ್ತು. ಆದ್ರೆ 6ನೇ ವಿಕೆಟಿಗೆ ಜಿತೇಶ್ ಶರ್ಮಾ ಹಾಗೂ ಲಿವಿಂಗ್‌ಸ್ಟೋನ್ ಜೋಡಿ 12 ಎಸೆತಗಳಲ್ಲಿ ಸ್ಫೋಟಕ 36 ರನ್ ಜೊತೆಯಾಟ ನೀಡಿತ್ತು. ಇವರಿಬ್ಬರ ಸಿಕ್ಸರ್, ಬೌಂಡರಿ ಆಟ ಕೂಡ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆದರೆ ಇವರಿಬ್ಬರ ಆಟಕ್ಕೂ ಪಂಜಾಬ್ ಬೌಲರ್‌ಗಳು ಬ್ರೇಕ್ ಹಾಕಿದ್ರು.