ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೈಟಾನಿಕ್ ಅವಶೇಷಗಳನ್ನು ನೋಡಲು ಹೊರಟಿದ್ದ ಸಣ್ಣ ಜಲಾಂತರ್ಗಾಮಿ ನಿನ್ನೆ ನಾಪತ್ತೆಯಾಗಿದ್ದು, ಇದರಲ್ಲಿ ಪಾಕಿಸ್ತಾನದ ಬಿಲೇನಿಯರ್ ಹಾಗೂ ಆತನ ಪುತ್ರ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಜಲಾಂತರ್ಗಾಮಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದಿಲ್ಲ. ಸಮುದ್ರದೊಳಗೆ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಒಟ್ಟಾರೆ ಐದು ಮಂದಿ ಇದ್ದರು. ಇದರಲ್ಲಿ ಪಾಕಿಸ್ತಾನದ ಬಿಲೇನಿಯರ್ ಉದ್ಯಮಿ ಶೆಹಜಾದಾ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್ ಕೂಡ ಇದ್ದರು.
ಈ ಬಗ್ಗೆ ಕುಟುಂಬ ಸ್ಪಷ್ಟನೆ ನೀಡಿದ್ದು, ಇಬ್ಬರೂ ತೆರಳಿದ್ದನ್ನು ಖಚಿತಪಡಿಸಿದ್ದಾರೆ. ಜಲಾಂತರ್ಗಾಮಿಯಲ್ಲಿ ಇನ್ನೂ ಕೆಲ ಗಂಟೆಗಳ ಕಾಲ ಆಮ್ಲಜನಕ ಉಳಿದಿದೆ ಎನ್ನಲಾಗಿದೆ. ಪ್ರಿನ್ಸ್ ದಾವೂದ್ ಪಾಕಿಸ್ತಾನದ ಶ್ರೀಮಂತ ಕುಟುಂಬಗಳಲ್ಲಿ ಒಂದಕ್ಕೆ ಸೇರಿದ್ದಾರೆ. ಜತೆಗೆ ಎಸ್ಇಟಿಐ ಸಂಸ್ಥೆಯ ಟ್ರಸ್ತಿ ಕೂಡ ಆಗಿದ್ದಾರೆ.
ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸೋದಕ್ಕೆ ಎರಡೂ ಕೋಟಿಗೂ ಹೆಚ್ಚು ಹಣ ಪಾವತಿ ಮಾಡಬೇಕು, ಇನ್ನು ಇಲ್ಲಿ 98 ಗಂಟೆಗಳ ಕಾಲ ಆಕ್ಸಿಜನ್ ಸಪ್ಲೇ ಇರುತ್ತದೆ.