ಬಿಜೆಪಿ ಕಾರ್ಯಕರ್ತರು ಮಾದರಿಯಾಗಿರಬೇಕು: ಜೆ.ಪಿ.ನಡ್ಡಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಕಾರ್ಯಕರ್ತರು ಪರಸ್ಪರ ಪ್ರೀತಿಭಾವನೆಯಿಂದ ಗೌರವಯುತವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದಲ್ಲಿ ಬಿಜೆಪಿ ಕಾರ್ಯಕರ್ತರು ಮಾದರಿಯಾಗಿ ನಿಲ್ಲಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಸಲಹೆ ನೀಡಿದರು.
ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವು ಬೇರೆ ಪಕ್ಷಗಳಿಂದ ಹೇಗೆ ಭಿನ್ನವಾಗಿದ್ದೇವೆ ಎಂಬುದನ್ನು ಅರಿಯಬೇಕು. ಕೇವಲ ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅನಿವಾರ್ಯ ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಪಕ್ಷಕ್ಕಾಗಿ ದುಡಿಯುವವರು ನಮ್ಮ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯ ವೈಶಿಷ್ಟ್ಯವನ್ನು ಅರಿಯಬೇಕು ಎಂದು ಅವರು ನುಡಿದರು.
ಬಿಜೆಪಿ ಇಡೀ ವಿಶ್ವದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ಈ ವಿಶೇಷತೆಯನ್ನು ಅರಿತು ನಡೆಯಬೇಕಿದೆ. ಬಿಜೆಪಿ ಎಲ್ಲರನ್ನೂ ಪರಿಗಣಿಸುತ್ತದೆ. ಎಲ್ಲಾ ಕಾರ್ಯಕರ್ತರ ಬಗ್ಗೆ ಪಕ್ಷಕ್ಕೆ ಮಾಹಿತಿಯಿದೆ. ಬಿಜೆಪಿಯೆನ್ನುವುದು ಎನ್ಸೈಕ್ಲೋಪೀಡಿಯಾವಿದ್ದಂತೆ; ಎಲ್ಲರ ಬಗ್ಗೆಯೂ ಮಾಹಿತಿ ಇಟ್ಟುಕೊಂಡಿದೆ. ಎಲ್ಲಿ ಬಿಜೆಪಿಯ ಅವಶ್ಯಕತೆಯಿದೆಯೋ ಅಲ್ಲಿ ಬಿಜೆಪಿ ಧಾವಿಸುತ್ತದೆ. ನಾವು ಬೇರೆಯವರಿಗಿಂತ ಭಿನ್ನ ಎಂದು ತಿಳಿಸಿದರು.
ಸಮಾಜವಾದಿ, ಡಿಎಂಕೆ, ಆರ್.ಜೆ.ಡಿ., ಜನತಾದಳದಂಥ ಪಕ್ಷಗಳಲ್ಲಿ ಯಾರೂ ಪ್ರಧಾನಿಯಾಗಲು ರಾಜ್ಯಾಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷರಾಗಲೂ ಸಾಧ್ಯವಿಲ್ಲ. ಇಂತಹ ಪಕ್ಷಗಳಲ್ಲಿ ಕುಟುಂಬದ ಸದಸ್ಯರಷ್ಟೇ  ಅಧಿಕಾರ ಅನುಭವಿಸಲು ಸಾಧ್ಯ. ಕಲಿಯುವಿಕೆ ಎನ್ನುವುದು ಜೀವನದ ಪ್ರತಿ ದಿನದಲ್ಲಿಯೂ ಇರುತ್ತದೆ. ಹೀಗಾಗಿ ಕಲಿಯಲು ಯಾರೂ ಹಿಂದೇಟು ಹಾಕಬೇಡಿ. ತರಬೇತಿ ಎನ್ನುವುದು ಕಲಿಯುವಿಕೆ ಎನ್ನುವುದು ಬಿಜೆಪಿಯಲ್ಲಿ ಇದ್ದೇ ಇದೆ. ಹೊಸ ವಿಷಯಗಳ ಕಲಿಯುವಿಕೆ ಪಕ್ಷದಲ್ಲಿ ಇದ್ದೇ ಇದೆ. ಸಣ್ಣ ಸಣ್ಣ ಆಸಕ್ತಿಗಳೇ ಮನುಷ್ಯನನ್ನು ಮನಸನ್ನು ಪ್ರೇರೇಪಿಸುತ್ತವೆ ಎಂದು ಕಿವಿಮಾತು ಹೇಳಿದರು.
ಪ್ರತಿ ಜನಪ್ರತಿನಿಧಿಯೂ ಕಾರ್ಯಕರ್ತನಾಗಿರುತ್ತಾನೆ. ಎಲ್ಲರೂ ಕಲಿಯಲೇಬೇಕು. ಎಷ್ಟೇ ತಿಳಿದರೂ ಕಡಿಮೆಯೇ ಎಂಬ ಮನಸ್ಥಿತಿ ಇರಲಿ. ಹೀಗಾಗಿ ಎಲ್ಲಾ ಕ್ಷೇತ್ರಗಳ ಬಗ್ಗೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಅರಿವು ಇರಬೇಕು. ಪಕ್ಷದ ವಿಷಯಗಳನ್ನು ಸಾಧನೆಗಳನ್ನು ಎಲ್ಲರೂ ಸರಳರೂಪದಲ್ಲಿ ತಮ್ಮದೇ ಭಾಷೆಯಲ್ಲಿ ಜನರ ಮುಂದೆ ಇಡುವ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು. ಕಾರ್ಯಕರ್ತರು ಸದಾ ಸಕ್ರಿಯರಾಗಿರಬೇಕು. ನಮ್ಮ ಪರಿಚಯವೇನೆಂಬುದು ಕೇಳಿದರೆ ಅದು ಬಿಜೆಪಿಯಾಗಬೇಕು. ಎಲ್ಲರ ಜಾತಿ ಬಿಜೆಪಿಯಾಗಬೇಕು. ಇಂತಹ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಹಿಂದುಳಿದ ಜಾತಿಗಳ ಪ್ರಭಾವಿ ಯಾರು? ನಾಯಕ ಯಾರು? ಎಂಬುದನ್ನು ತಿಳಿಯಬೇಕು. ನಮ್ಮನಮ್ಮಲ್ಲಿ ಜಾತಿ ದ್ವೇಷ ಬರಬಾರದು. ಎಲ್ಲಾ ಜಾತಿಗಳ ಪ್ರಭಾವಿಗಳು ನಾಯಕರು ಬಿಜೆಪಿಯಾಗಬೇಕು. ಸಣ್ಣ ಸಣ್ಣ ಮಾತುಗಳನ್ನಾಡುವವರು ಸಣ್ಣದಾಗಿಯೇ ಇದ್ದು ವ್ಯರ್ಥ ಉತ್ಪನ್ನಗಳಾಗಿ ಉಳಿದುಬಿಡುತ್ತಾರೆ. ಪ್ರಧಾನ ಮಂತ್ರಿಗಳು ಒಂದೊಂದು ವಿಷಯವನ್ನು ಒಂದೊಂದು ಸಮುದಾಯ ಒಂದೊಂದು ಜಾತಿಯನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಒಗ್ಗೂಡಿಸಿ ಸುಂದರ ಪುಷ್ಪಗುಚ್ಛವÀನ್ನು ತಯಾರು ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ನುಡಿದರು.
ಒಂದು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರೊಂದಿಗೂ ಮಾತನಾಡದೇ ಏಕಾಗ್ರತೆಯಿಂದ ನಮ್ಮ ಆರ್ಥಿಕತೆ …

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!