ಹೊಸದಿಗಂತ ವರದಿ ಮಡಿಕೇರಿ:
ಹಬ್ಬಕ್ಕೆಂದು ಅಜ್ಜಿ ಮನೆಗೆ ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.
ಮೂಲತಃ ಬೈಲಕೊಪ್ಪ ನಿವಾಸಿ ನಾಸೀರ್ ಪಾಷ ಎಂಬವರ ಪುತ್ರ ಪರ್ಹಾನ್ (12)ಮೃತ ದುರ್ದೈವಿ. .
ರಂಜಾನ್ ಹಬ್ಬಕ್ಕೆಂದು ಬೈಲಕೊಪ್ಪದಿಂದ ಶನಿವಾರಸಂತೆಯಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದ ಪರ್ಹಾನ್, ನಿನ್ನೆ ಶನಿವಾರಸಂತೆಯಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದ ಮಾವನೊಂದಿಗೆ ಸಂಜೆಯವರೆಗೆ ಕಾಲಕಳೆದಿದ್ದ. ಬಳಿಕ ತನ್ನ ಮಾವನ ಮಗನೊಂದಿಗೆ ಹೆಮ್ಮನೆಯಲ್ಲಿರುವ ಹೊಳೆಯಲ್ಲಿ ಈಜಲು ತೆರಳಿದ್ದಾನೆ.
ಹೊಳೆಯ ಬದಿಯ ಕಲ್ಲಿನಲ್ಲಿ ಪಾಚಿ ಕಟ್ಟಿದ್ದರಿಂದ ಕಾಲು ಜಾರಿ ನೀರಿಗೆ ಬಿದ್ದ ಪರ್ಹಾನ್ ಸಾವನ್ನಪ್ಪಿದ್ದಾನೆ. ಸ್ಥಳೀಯರ ಸಹಕಾರದೊಂದಿಗೆ ರಾತ್ರಿ ಪೂರ್ತಿ ಹುಡುಕಾಟ ನಡೆಸಿದ ಪೊಲೀಸರು ಭಾನುವಾರ ಬೆಳಗಿನ ಜಾವ 2 ಗಂಟೆಗೆ ಮೃತದೇಹವನ್ನು ಹೊರತೆಗೆದರು.
ಸೋಮವಾರಪೇಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರಿಕ್ಷೆ ನಡೆಸಿದ ಬಳಿಕ ಪೋಷಕರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು. ಘಟನೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.