ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣದಲ್ಲಿ ಕಾರ್ಟೂನ್ ಗೀಳು ಹಚ್ಚಿಕೊಂಡಿದ್ದ ಬಾಲಕನೊಬ್ಬ ನೇಣಿಗೆ ಕೊರಳೊಡ್ಡಿ ಮೃತಪಟ್ಟಿದ್ದಾನೆ. ಸದಾ ಟಿವಿ ಮೊಬೈಲ್ನಲ್ಲಿ ಕಾರ್ಟೂನ್ ನೋಡುತ್ತಲೇ ದಿನ ಕಳೆಯುತ್ತಿದ್ದ ಬಾಲಕ, ಶಾಲೆಯಿಂದ ಮನೆಗೆ ಬಂದ ತಕ್ಷಣ ಮೊಬೈಲ್ ಹಿಡಿದುಕೊಳ್ತಿದ್ದ ಎಂದು ಪೋಷಕರು ಹೇಳಿದ್ದಾರೆ.
ಕೈಲಾಸಪುರಂನ ಕಸ್ತೂರಿ ನಗರದ ಬಾಲಕ ಡಿಂಪಲ್ ಸೂರ್ಯನಿಗೆ ಎಂಟು ವರ್ಷ, ಆತ ಕಾರ್ಟೂನ್ ನೋಡುತ್ತಾ ಅದರಲ್ಲಿ ಹೇಗೆ ಆಡುತ್ತಾರೋ ಹಾಗೇ ಆಡುತ್ತಿದ್ದು, ಕಾರ್ಟೂನ್ನಂತೆ ನಟಿಸುತ್ತಿದ್ದ.
ಈ ಹಿಂದೆಯೂ ಒಮ್ಮೆ ಮಂಚಕ್ಕೆ ಹಗ್ಗ ಸುತ್ತಿ ಕೊರಳಿಗೆ ಕಟ್ಟಿಕೊಳ್ಳಲು ಯತ್ನಿಸಿದ್ದ, ಇದು ಸಾವಿನ ಆಟ ಎಂದು ಎಲ್ಲರಿಗೂ ಹೇಳಿದ್ದ. ಆಗ ತಂದೆ ತಾಯಿ ಬುದ್ದಿಹೇಳಿ ಸುಮ್ಮನಾಗಿದ್ದರು.
ಇದೀಗ ಶಾಲೆ ಮುಗಿಸಿ ಬಂದು ಮನೆಯ ಹೊರಗೆ ಆಡುತ್ತಿದ್ದ ಬಾಲಕ ಸೀರೆಯಿಂದ ನೇಣು ಬಿಗಿದು ಮೃತಪಟ್ಟಿದ್ದಾನೆ. ಆದರೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿವೆ. ಅಷ್ಟು ಸಣ್ಣವನಿಗೆ ನೇಣು ಹಾಕಿಕೊಳ್ಳಲು ಬಂದಿದ್ದು ಹೇಗೆ? ಆತ ಯಾವ ಗೇಮ್ ಆಡ್ತಾ ಇದ್ದ ಎನ್ನುವ ಮಾಹಿತಿ ಹೊರಬಿದ್ದಿಲ್ಲ.