ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್ಜಿ ಚಟಕ್ಕೆ ದಾಸನಾಗಿದ್ದ ಬಾಲಕನೋರ್ವ ಪೋಷಕರು ಪೋನ್ ಕಸಿದುಕೊಂಡರು ಎಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈತ ಸದಾ ಫೋನ್‌ನಲ್ಲಿಯೇ ಮುಳುಗಿರುತ್ತಿದ್ದ. ಆನ್‌ಲೈನ್ ಫೇಮಸ್ ಗೇಮ್ ಆಗಿರುವ ಪಬ್ಜಿ ಚಟಕ್ಕೆ ಬಿದ್ದಿದ್ದ ಆತ ಓದು ಬರಹ ಬಿಟ್ಟು ಸದಾಕಾಲ ಮೊಬೈಲ್‌ನಲ್ಲೇ ಜೊತಾಡುತ್ತಿದ್ದ, ಇದನ್ನು ನೋಡಿ ನೋಡಿ ಬೇಸತ್ತ ಪೋಷಕರು ಆತನ ಕೈನಿಂದ ಫೋನ್ ಕಿತ್ತು ಆತನಿಗೆ ಸಿಗದಂತೆ ಇಟ್ಟಿದ್ದರು. ಇದರಿಂದ ನೊಂದ ಬಾಲಕ ಸಾವಿಗೆ ಶರಣಾಗಿದ್ದಾನೆ. ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನನ್ನು ಬೆಟಿ ರಿಶೆಂದರ್ ಎಂದು ಗುರುತಿಸಲಾಗಿದೆ.
ಪಬ್ಜಿ ಚಟಕ್ಕೆ ದಾಸನಾಗಿದ್ದ ಈ ಬಾಲಕ ದಿನದ 10 ಗಂಟೆಯೂ ಫೋನ್‌ನಲ್ಲಿಯೇ ಮುಳುಗಿರುತ್ತಿದ್ದ. ಅತಿರೇಕ ಎಂಬಂತೆ ಈತ ತನಗೆ ಪಬ್ಜಿ ಆಡುವುದಕ್ಕೆ ಸಮಯವೇ ಸಿಗುತ್ತಿಲ್ಲ ಎಂದು ಹೇಳಿ ಶಾಲೆಯ ತರಗತಿಗಳಿಗೂ ಹಾಜರಾಗುತ್ತಿರಲಿಲ್ಲ, ಈತನ ಅವತಾರವನ್ನು ನೋಡುವಷ್ಟು ನೋಡಿದ ಪೋಷಕರು ಆತನನ್ನು ಕೌನ್ಸೆಲಿಂಗ್‌ಗಾಗಿ ಮಾನಸಿಕ ತಜ್ಞ ವೈದ್ಯರು ಹಾಗೂ ನರಶಸ್ತ್ರಜ್ಞರ ಬಳಿಗೂ ಕರೆದುಕೊಂಡು ಹೋಗಿದ್ದ ಆದರೆ ಆತನ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ. ಅಲ್ಲದೇ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ಆತ ಅಲ್ಲಿ ವೈದ್ಯರಿಗೂ ಬೆದರಿಕೆಯೊಡ್ಡಿದ್ದ ಎಂದು ಪೋಷಕರು ಹೇಳಿದ್ದಾರೆ.