ಲಂಡನ್‌ನಲ್ಲಿ ಹಿಂದೂ ಸಮುದಾಯದವರೊಂದಿಗೆ ಬೆಳಕಿನ ಹಬ್ಬ ಆಚರಿಸಿದ ಬ್ರಿಟನ್ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್‌ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ದೀಪಾವಳಿಯನ್ನು ಆಚರಿಸಿದ್ದಾರೆ. ಹೌದು, ಲಂಡನ್‌ನಲ್ಲಿನ ಡೌನಿಂಗ್ ಸ್ಟ್ರೀಟ್ ಹಿಂದೂ ಸಮುದಾಯದವರೊಂದಿಗೆ ಸುನಕ್ ದಂಪತಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ.

ಬ್ರಿಟನ್​​ ಪ್ರಧಾನಿ ರಿಷಿ ಸುನಕ್ ಅವರು ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಲಂಡನ್​​ನಲ್ಲಿ ಹಿಂದೂ ಸಮುದಾಯದವರು ಆಯೋಜಿಸಿದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
ಈ ಬಗ್ಗೆ ರಿಷಿ ಸುನಕ್ ಟ್ವೀಟ್ ಮಾಡಿದ್ದು, ಇದು ಕತ್ತಲೆಯ ಮೇಲೆ ಬೆಳಕಿನ ವಿಜಯೋತ್ಸವ ಎಂದು ಹೇಳಿದ್ದಾರೆ. ಪ್ರಧಾನಿ ರಿಷಿ ಹಾಗೂ ಅಕ್ಷತಾ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!