ಹೊಸದಿಗಂತ ಡಿಜಿಟಲ್ ಡೆಸ್ಕ್:
15 ದಿನಗಳಿಂದ ನಡೆಯುತ್ತಿರುವ ರಾಜ್ಯದ ಬಜೆಟ್ ಅಧಿವೇಶನ ಇಂದು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ. ಕಳೆದ ಶುಕ್ರವಾರ ಕೊನೆಗೊಳ್ಳಬೇಕಿದ್ದ ಬಜೆಟ್ ಅಧಿವೇಶನವನ್ನು ನಾಲ್ಕೈದು ದಿನ ವಿಸ್ತರಿಸಲಾಗಿತ್ತು.
ಸಿದ್ದರಾಮಯ್ಯ ಅವರು ಇಂದು ಸಂಸತ್ತು ಮತ್ತು ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. 2024-2025 ರ ಬಜೆಟ್ ಅನ್ನು ಆಯವ್ಯಯ ವಿಧೇಯಕಕ್ಕೆ ಸದನದಲ್ಲಿ ಅಂಗೀಕಾರ ಪಡೆಯಲಿದ್ದಾರೆ.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಹಾಕಾರ ಶುರುವಾಗಿದೆ. ಆದರೆ, ಸರ್ಕಾರ ನೀರಿನ ವ್ಯವಸ್ಥೆ ರೂಪಿಸದ ಕಾರಣ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ವಿಪಕ್ಷಗಳು ನಿರ್ಧರಿಸಿವೆ.