ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ ತಗುಲಿದ್ದು, ಚಾಲಕ ಹಾಗೂ ಕಂಡಕ್ಟರ್ ಬಸ್‌ನಲ್ಲಿಯೇ ಸಜೀವ ದಹನವಾಗಿದ್ದಾರೆ.
ದೀಪಾವಳಿ ಹಬ್ಬಕ್ಕೆ ಬಸ್‌ಗೆ ಪೂಜೆ ಮಾಡಿ, ದೀಪ ಹಚ್ಚಿದ್ದಾರೆ. ಬಸ್‌ನೊಳಗೆ ಚಾಲಕ ಹಾಗೂ ಕಂಡಕ್ಟರ್ ಮಲಗಿದ್ದಾರೆ. ನಿದ್ದೆ ಮಾಡುತ್ತಿದ್ದ ಚಾಲಕ ಹಾಗೂ ಕಂಡಕ್ಟರ್‌ಗೆ ಬೆಂಕಿಹೊತ್ತಿದ್ದು ತಿಳಿದಿಲ್ಲ. ಕ್ಷಣವೇಗದಲ್ಲಿ ಬಸ್ ಹೊತ್ತಿ ಉರಿದಿದ್ದು, ಚಾಲಕ ಹಾಗೂ ಕಂಡಕ್ಟರ್ ಸಜೀವ ದಹನವಾಗಿದ್ದಾರೆ.
ಈ ಬಗ್ಗೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿದೆ. ತಕ್ಷಣವೇ ಪೊಲೀಸರು ಧಾವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದಾಗಲೇ ಬಸ್‌ನಲ್ಲಿ ಎರಡು ಮೃತದೇಹ ಪತ್ತೆಯಾಗಿದೆ. ಚಾಲಕ ಮದನ್ ಹಾಗೂ ಖಲಾಸಿ ಇಬ್ರಾಹಿಂ ಮೃತರು.