ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇದೀಗ ಆಟೊರಿಕ್ಷಾ ದರವನ್ನು ಹೆಚ್ಚಿಸುವಂತೆ ಒತ್ತಡವೂ ಇದೆ. ಆಟೋರಿಕ್ಷಾ ದರವನ್ನು ಹೆಚ್ಚಿಸುವಂತೆ ಕೆಲವು ಚಾಲಕರ ಸಂಘಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿವೆ.
ಒಂದು ಕಿಲೋಮೀಟರ್ಗೆ 5 ರೂಪಾಯಿ, ಎರಡು ಕಿಲೋಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಮನವಿ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್ಗೆ 30 ರೂಪಾಯಿ ಇದೆ. ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಒತ್ತಾಯಿಸಿದೆ.
ಡಿಸೆಂಬರ್ 23, 2024 ರಂದು ಬಡ್ಡಿದರ ಹೆಚ್ಚಳದ ಕುರಿತು ಫೋರಮ್ ಸಭೆಯನ್ನು ನಡೆಸಲಾಯಿತು. ಆದಾಗ್ಯೂ, ಹಲವಾರು ಕಾರಣಗಳಿಗಾಗಿ ಈ ಸಭೆಯನ್ನು ಮುಂದೂಡಲಾಯಿತು. ಇದೀಗ ಈ ತಿಂಗಳ ಮೂರನೇ ವಾರದಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಪ್ರಯಾಣ ದರ ಹೆಚ್ಚಿಸುವ ಕುರಿತು ನಿರ್ಧರಿಸಲಾಗಿದೆ.
ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.