ಐತಿಹಾಸಿಕ ಕರಗಕ್ಕೆ ಸಜ್ಜಾಯ್ತು ರಾಜಧಾನಿ ಬೆಂಗಳೂರು, ನಾಳೆಯಿಂದಲೇ ಸಂಭ್ರಮ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಉತ್ಸವ ನಾಳೆಯಿಂದ ಜರುಗಲಿದೆ. ಧರ್ಮರಾಯ ದೇವಸ್ಥಾನದಲ್ಲಿ ಏ.14ರ ವರೆಗೂ ಕರಗ ಉತ್ಸವ ನಡೆಯಲಿದ್ದು, ಎಲ್ಲ ರೀತಿಯ ತಯಾರಿ ನಡೆಯುತ್ತಿದೆ.

ನಾಳೆ ರಾತ್ರಿ 10 ಗಂಟೆಗೆ ಕರಗ ಆಚರಣೆಗಳು ಶುರುವಾಗಲಿವೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಕರಗ ಹೊರುತ್ತಿದ್ದಾರೆ.

ಈ ಬಾರಿ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಏಪ್ರಿಲ್ 4 ರಂದು ರಥೋತ್ಸವ ಮತ್ತು ಧ್ವಜಾರೋಹಣ ನಡೆಯಲಿದೆ. ಏ.5 ರಿಂದ ಏ.8 ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಇರಲಿದೆ. ಏ.9 ರಂದು ಆರತಿ ದೀಪಗಳು, ಏ.10 ರ ಗುರುವಾರ ಹಸಿ ಕರಗ, ಏ.11 ರಂದು ಹೊಂಗಲು ಸೇವೆ, ಏ.12 ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ, ಏ.13 ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ, ಏ.14 ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ಇರಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!