ಹೊಸದಿಗಂತ ವರದಿ ಹಾಸನ :
ತಾಲೂಕಿನ ಜವೇನಹಳ್ಳಿ ಗ್ರಾಮದ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾಂಪೌಂಡ್ ಹಾರಿ ಹಳ್ಳಕ್ಕೆ ಬಿದ್ದಿರುವ ಘಟನೆ ನಡೆದಿದೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ, ಕೆನರಾ ಬ್ಯಾಂಕ್ ಬ್ಯಾಂಕ್ ಉದ್ಯೋಗಿ ಆಗಿರುವ ರಜತ್ ಕಾರಿನಲ್ಲಿದ್ದ ಯುವಕ. ವೇಗವಾಗಿ ಬಂದ ಕಾರು ನಿಯಂತ್ರ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ರಜತ್ ತೀವ್ರವಾಗಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರು ಪಲ್ಟಿ ಹೊಡೆದ ರಭಸಕ್ಕೆ ನುಜ್ಜುಗುಜ್ಜಾಗಿದೆ.
ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.