ಟಿಪ್ಪು ನಿಜ ಕನಸು ವಿರುದ್ಧ ಹಾಕಲಾಗಿದ್ದ ಪ್ರಕರಣ ವಾಪಸ್: ಅಡ್ಡಂಡ ಕಾರ್ಯಪ್ಪ

ಹೊಸದಿಗಂತ ವರದಿ, ವಿಜಯಪುರ:

ಟಿಪ್ಪು ನಿಜ ಕನಸು ವಿರುದ್ಧ ಹಾಕಲಾಗಿದ್ದ ಪ್ರಕರಣ ವಾಪಸ್ ಪಡೆದುಕೊಂಡಿದ್ದಾರೆ. ಇದು ಸಂತಸದ ಸಂಗತಿ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಮ್ಮ ಅಖಂಡ ಹೋರಾಟಕ್ಕೆ ಸಿಕ್ಕ ಜಯ ಆಗಿದೆ.
ನಾನು ಇದನ್ನ ಸಂಭ್ರಮಿಸುತ್ತೇನೆ. ಪ್ರಕರಣ ಆರಂಭದಲ್ಲಿ ನಮಗೆ ಹಿನ್ನಡೆ ಆಯ್ತು. ಕೋರ್ಟಗೆ ಅನೇಕ ದಾಖಲೆಗಳನ್ನ ನೀಡಿದ್ವಿ.
ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದರು ಎಂದರು. ಅಲ್ಲದೇ, ನಾಟಕ ಸತ್ಯದಿಂದ ಕೂಡಿದೆ, ಯಾವುದು ಸುಳ್ಳು ತೋರಿಸಿಲ್ಲ. ನಮ್ಮ ಬಳಿ ಸಾಕ್ಷಿಗಳಿವೆ ಎಂದಾಗ ತಡೆಯಾಜ್ಞೆ ತೆರವಾಯ್ತು. ಹೀಗಾಗಿ ಕರ್ನಾಟಕ ಸರ್ಕಾರ ಇದನ್ನೆಲ್ಲ ಗಮನಿಸಬೇಕು ಎಂದರು.

ದೆಹಲಿಯಲ್ಲಿನ ಮೊಘಲ್ ಉದ್ಯಾನಕ್ಕೆ ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಿದ ಹಾಗೇ ಇಲ್ಲಿನ ಆಲಮಟ್ಟಿಯ ಮೊಘಲ್ ಉದ್ಯಾನಕ್ಕೂ ಹರ್ಡೇಕರ ಮಂಜಪ್ಪ ಎಂದು ಮರು ನಾಮಕರಣ ಮಾಡಬೇಕು ಎಂದರು.

ಸಂಶೋಧಕ ಆನಂದ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!