ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದ ಕೃತ್ಯ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ಅಮೆರಿಕ ಆಘಾತ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಕೈಗೊಳ್ಳುವ ಯಾವುದೇ ನ್ಯಾಯಪರ ಕ್ರಮಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದೆ.
ವಿದೇಶಾಂಗ ಇಲಾಖೆಯ ಉಪ ವಕ್ತಾರವಾದ ವೇದಾಂತ್ ಪಟೇಲ್, ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ಈ ತೀವ್ರವಾದ ದಾಳಿಯ ವಿಡಿಯೋದಿಂದ ಮನಸ್ಸಿಗೆ ನೋವಾಗಿದೆ. ಇದು ವಿಶ್ವವೇ ಆಘಾತಪಡುವಂತ ವಿಷಯ ಎಂದಿದ್ದಾರೆ.
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಮಹಿಳೆಯನ್ನು ಬೆತ್ತಲ ಮಾಡಿ ಇಡೀ ಊರ ತುಂಬ ಮೆರವಣಿಗೆ ಮಾಡಿ, ಸಾಮೂಹಿ ಅತ್ಯಾಚಾರ ನಡೆಸಿತ್ತು. ಸಾಲದಕ್ಕೆ ಕೃತ್ಯವನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದರು. ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.