ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆಯನ್ನು ಇನ್ನೂ ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಘಟನೆಯು ಶಂಕಿತ ಉಗ್ರ, ಬಂಧಿತ ಯಾಸಿನ್ ಮಲಿಕ್ ನೇತೃತ್ವದಲ್ಲಿದ್ದು, ಉಗ್ರವಾದ ಹಾಗೂ ಪ್ರತ್ಯೇಕತಾವಾದವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪ ಹೊತ್ತಿದೆ.
ಇದೇ ಸಂದರ್ಭ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್, ಅದರ ನಾಲ್ಕು ಬಣಗಳನ್ನು ಕೂಡಾ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರಲ್ಲಿ ಜೆಕೆಪಿಎಲ್, ಜೆಕೆಪಿಎಲ್, ಜೆಕೆಪಿಎಲ್, ಜೆಕೆಪಿಎಲ್ ಸಂಘಟನೆಗಳು ಒಳಗೊಂಡಿವೆ.