ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಸ್ಸೋಂ ಪ್ರವಾಸದಲ್ಲಿರುವ ಕೇಂದ್ರಗೃ ಹ ಸಚಿವ ಅಮಿತ್ ಶಾ ಇಂದು ಭಾರತ-ಬಾಂಗ್ಲಾ ಗಡಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಆವರು ಇಂದು ಅಸ್ಸೋಂಗೆ ಭೇಟಿ ನೀಡಿದ್ದು, ಮೂರು ದಿನಗಳ ಪ್ರವಾಸದಲ್ಲಿರಲಿದ್ದಾರೆ. ಈ ವೇಳೆ ಅವರು ಭಾರತ-ಬಾಂಗ್ಲಾದೇಶದ ಗಡಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು.
ಬಾಂಗ್ಲಾದೇಶದ ಗಡಿಯಲ್ಲಿರುವ ಮಂಕಾಚಾರ್ನ ಬಿಎಸ್ಎಫ್ ಯೋಧರ ಗಡಿಯ ಹೊರಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸಹ ಸಾಥ್ ನೀಡಿದರು.
24X7 ಸೇವೆ ಸಲ್ಲಿಸುತ್ತಿರುವ ಬಿಎಸ್ಎಫ್ ಯೋಧರನ್ನು ಶ್ಲಾಘಿಸಿದ ಅವರು, ನಿಮ್ಮಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಸುರಕ್ಷಿತರಾಗಿದ್ದಾರೆಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ