ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು (semiconductor plants) ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ಇಂದು ಪ್ರಧಾನಿಯವರು ದೇಶದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಸ್ಥಾಪಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಟಾಟಾ (Tata) ಮತ್ತು ಪವರ್‌ಚಿಪ್-ತೈವಾನ್ ಸ್ಥಾಪಿಸಲಿದೆ. ಈ ಪ್ಲಾಂಟ್ ಧೋಲೆರಾದಲ್ಲಿದೆ ಎಂದು ಹೇಳಿದ್ದಾರೆ.
ಮುಂದಿನ 100 ದಿನಗಳಲ್ಲಿ ಎಲ್ಲಾ ಮೂರು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು . ತಿಂಗಳಿಗೆ ಒಟ್ಟು 50,000 ವೇಫರ್‌ಗಳನ್ನು ತಯಾರಿಸಲಾಗುವುದು. ಈ ಸೌಲಭ್ಯದ ಮೂಲಕ ವಾರ್ಷಿಕ 300 ಕೋಟಿ ಚಿಪ್‌ಗಳನ್ನು ತಯಾರಿಸಲಾಗುವುದು. ಅಸ್ಸಾಂನಲ್ಲಿ ಮೊದಲ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಾಗುವುದು. ಇಲ್ಲಿಂದ ದಿನಕ್ಕೆ 48 ಮಿಲಿಯನ್ ಚಿಪ್‌ಗಳನ್ನು ತಯಾರಿಸಲಾಗುವುದು ಎಂದು ವೈಷ್ಣವ್ ಹೇಳಿದರು.
ಎಲ್ಲಾ ಮೂರು ಘಟಕಗಳಲ್ಲಿ ಸಂಚಿತ ಹೂಡಿಕೆ ಒಂದು ಲಕ್ಷದ ಇಪ್ಪತ್ತಾರು ಸಾವಿರ ಕೋಟಿಯಾಗಿರುತ್ತದೆ. FAB ನಲ್ಲಿ ಹೂಡಿಕೆ 91,000 ಕೋಟಿ ಆಗಿರುತ್ತದೆ. ಅಸ್ಸಾಂ ಘಟಕದಲ್ಲಿ 27,000 ಕೋಟಿ ಹೂಡಿಕೆಯಾಗಲಿದೆ. ಸನಂದ್ ಘಟಕದಲ್ಲಿ ₹7,600 ಕೋಟಿ ಹೂಡಿಕೆಯಾಗಲಿದೆ’ ಸುದ್ದಿಗೋಷ್ಠಿಯಲ್ಲಿ ಸಚಿವರು ವಿವರಿಸಿದ್ದಾರೆ. ಇದರೊಂದಿಗೆ ಸೆಮಿಕಂಡಕ್ಟರ್ ಯೋಜನೆಯಲ್ಲಿನ ಒಟ್ಟು ಹೂಡಿಕೆಯು ಸುಮಾರು ₹1.26 ಲಕ್ಷ ಕೋಟಿಗಳಷ್ಟಿದೆ.ಸಿಜಿ ಪವರ್ ಗುಜರಾತ್‌ನಲ್ಲಿ ಅರೆವಾಹಕ ಘಟಕವನ್ನು ಜಪಾನ್‌ನ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಮತ್ತು ಥಾಯ್ಲೆಂಡ್‌ನ ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ ಜೊತೆಯಲ್ಲಿ ಸ್ಥಾಪಿಸಲಿದೆ ಎಂದು ಸಚಿವರು ಹೇಳಿದರು.