ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಭಾರತೀಯ ಕುಸ್ತಿ ಫೆಡರೇಶನ್ (WFI) ವ್ಯವಹಾರಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.
ಭೂಪಿಂದರ್ ಸಿಂಗ್ ಬಜ್ವಾ ಸಮಿತಿಯ ನೇತೃತ್ವ ವಹಿಸಿದ್ದು, ಎಂ.ಎಂ. ಸೋಮಯ್ಯ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಕುಸ್ತಿ ಫೆಡರೇಶನ್ ಅಮಾನತುಗೊಳಿಸಿತ್ತು. ಇದಾದ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ತಾತ್ಕಾಲಿಕ ಕುಸ್ತಿ ಸಮಿತಿಯನ್ನ ರಚಿಸಿದೆ.