ಆದಾಯ ತೆರಿಗೆ ಮಸೂದೆ- 2025 ಹಿಂಪಡೆದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆದಾಯ ತೆರಿಗೆ ಮಸೂದೆ 2025 ಅನ್ನು ಕೇಂದ್ರ ಸರ್ಕಾರವು ಲೋಕಸಭೆಯಿಂದ ಹಿಂಪಡೆದಿದ್ದು, ಆಗಸ್ಟ್‌ 11ರಂದು ಹೊಸ ಆವೃತ್ತಿಯನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ.

ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಆಯ್ಕೆ ಸಮಿತಿಯ ವರದಿಯ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಈ ಮಸೂದೆಯನ್ನು ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಗಿತ್ತು. ಮಸೂದೆಯನ್ನು ಪರಿಶೀಲಿಸಲು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದಲ್ಲಿ 31 ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಮಸೂದೆಯನ್ನು ಪರಿಶೀಲಿಸಿ 285 ಸಲಹೆಗಳನ್ನು ನೀಡಿತ್ತು. ಸಮಿತಿಯು ಜುಲೈ 21 ರಂದು ಲೋಕಸಭೆಗೆ ತನ್ನ ವರದಿಯನ್ನು ಸಲ್ಲಿಸಿತು. ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಅಂಗೀಕರಿಸಿದೆ. ಅದಕ್ಕೆ ಸರಿಯಾದ ಶಾಸಕಾಂಗ ಅರ್ಥವನ್ನು ನೀಡಲು ಕೆಲವು ಸಲಹೆಗಳನ್ನು ಸಹ ಸ್ವೀಕರಿಸಿದ್ದು, ಅದನ್ನು ಸೇರಿಸಬೇಕಾಗಿದೆ.

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಹಿಂಪಡೆದ ಬಳಿಕ, ಆಯ್ಕೆ ಸಮಿತಿ ಸೂಚಿಸಿದ ಬದಲಾವಣೆ ಸೇರಿಸಿ ಮಸೂದೆಯನ್ನು ಹೊಸ ರೂಪದಲ್ಲಿ ತರಲಿದೆ ಎಂದು ತಿಳಿಸಿದರು.

ಮಸೂದೆಯ ವಿಭಿನ್ನ ಆವೃತ್ತಿಗಳಿಂದಾಗಿ ಗೊಂದಲವನ್ನು ತಪ್ಪಿಸಲು ಮತ್ತು ಎಲ್ಲಾ ಬದಲಾವಣೆಗಳನ್ನು ಒಳಗೊಂಡ ಸ್ಪಷ್ಟ ಮತ್ತು ಹೊಸ ಆವೃತ್ತಿಯನ್ನು ಒದಗಿಸಲು ಸೋಮವಾರ ಸದನದಲ್ಲಿ ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಪರಿಚಯಿಸಲಾಗುವುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!