ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದೊಳಗಿನ ಭಯೋತ್ಪಾದನೆ ಕುರಿತು ಜಗತ್ತಿಗೆ ಅರ್ಥ ಮಾಡಿಸಿ ಎಲ್ಲರ ಮುಂದೆ ಅದರ ಮುಖವಾಡ ಕಳಚಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಮ್ಮ ಟಿಎಂಸಿ ಸಂಸದರನ್ನು ನಾವು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇವಲ ಎನ್ಡಿಎ ಮಾತ್ರವಲ್ಲ ಎಲ್ಲಾ ಪಕ್ಷಗಳ ಸಂಸದರ ನಿಯೋಗವನ್ನು ಮಾಡಿದ್ದು, ಅವರು ವಿಶ್ವದೆಲ್ಲೆಡೆ ಸಂಚರಿಸಿ ಪಾಕ್ ಕಳ್ಳಾಟಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಕೇಂದ್ರ ಸಚಿವ ಕಿರಣ್ ರಿಜಿಜು ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಇದರಲ್ಲಿ ಭಾಗಿಯಾಗುವುದಾಗಿ ತಿಳಿಸಿದೆ. ರಾಜತಾಂತ್ರಿಕ ಪ್ರಯತ್ನಕ್ಕೆ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ತಮ್ಮ ಸಂಸದರನ್ನು ಕಳುಹಿಸಲು ಒಪ್ಪಿಗೆ ಸೂಚಿಸಿವೆ.
ಆದ್ರೆ ತೃಣಮೂಲ ಕಾಂಗ್ರೆಸ್ ಭಾರತ ಸರ್ಕಾರ ಆಪರೇಷನ್ ಸಿಂದೂರ್ ಹಾಗೂ ಪಾಕ್ ಉಗ್ರವಾದದ ಬಗ್ಗೆ ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿಕೊಳ್ಳುವುದಕ್ಕಾಗಿ ಕೈಗೊಂಡಿರುವ ಬಹು-ಪಕ್ಷ ನಿಯೋಗ ಅಭಿಯಾನದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ 30ಕ್ಕೂ ಹೆಚ್ಚು ದೇಶಗಳಿಗೆ ಬಹು-ಪಕ್ಷ ನಿಯೋಗವನ್ನು ಕಳುಹಿಸುತ್ತಿದೆ. ಈ ಉಪಕ್ರಮದಲ್ಲಿ ಯಾವುದೇ ಪಕ್ಷದ ಸಂಸದರು ಅಥವಾ ಪಕ್ಷದ ನಾಯಕರು ಸೇರುವುದಿಲ್ಲ ಎಂದು ಟಿಎಂಸಿ ಸ್ಪಷ್ಟಪಡಿಸಿದೆ.
ಬೆಂಗಾಲಿಗಳಿಗೆ ಮೆದುಳು ಮಮತಾ ಚುನಾವಣೆಯಲ್ಲಿ ಗೆಲುವು ಕಂಡ ದಿನದಿಂದಲೂ ನಿಷ್ಕ್ರಿಯವಾಗಿದೆ.ಕೇರಳ,ತೆಲಂಗಾಣ ,ತಮಿಳುನಾಡಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.