ಕೆಲಸದ ಸಮಯ ಹೆಚ್ಚಳ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ, ಕೆಲವು ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರು ಗರಿಷ್ಠ ಕೆಲಸದ ಸಮಯವನ್ನು ವಾರಕ್ಕೆ 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸಬೇಕು ಎಂಬ ಪ್ರಸ್ತಾಪ ಮಾಡಿದ್ದರು.

ಆದ್ರೆ ಇದೀಗ ವಾರಕ್ಕೆ ಗರಿಷ್ಠ ಕೆಲಸದ ಸಮಯವನ್ನು 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.

‘ವಾರಕ್ಕೆ ಗರಿಷ್ಠ ಕೆಲಸದ ಸಮಯವನ್ನು 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲ’ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಕಾರ್ಮಿಕರ ವಿಷಯ ಸಮಕಾಲೀನ ಪಟ್ಟಿಯಲ್ಲಿರುವುದರಿಂದ, ಕಾರ್ಮಿಕ ಕಾನೂನುಗಳ ಜಾರಿಯನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಅವರವರ ವ್ಯಾಪ್ತಿಯಲ್ಲಿ ಮಾಡುತ್ತವೆ ಎಂದು ಅವರು ಸದನಕ್ಕೆ ತಿಳಿಸಿದರು.

ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಪ್ರಕಾರ, ಕೆಲಸದ ಸಮಯ ಮತ್ತು ಅಧಿಕಾವಧಿ ಸೇರಿದಂತೆ ಕೆಲಸದ ಪರಿಸ್ಥಿತಿಗಳನ್ನು 1948 ರ ಕಾರ್ಖಾನೆ ಕಾಯ್ದೆ ಮತ್ತು ಆಯಾ ರಾಜ್ಯ ಸರ್ಕಾರಗಳ ಅಂಗಡಿಗಳು ಮತ್ತು ಕಂಪನಿಗಳ ಕಾಯ್ದೆಯ ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!