ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ಮಳೆಗೆ ಕಾಲುವೆ ನೀರಿನಲ್ಲಿ ಎರಡು ಕಾರುಗಳು ಮುಳುಗಿದ ಘಟನೆ ಚಿಕ್ಕಬಳ್ಳಾಪುರದ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಕಾಲುವೆಯಲ್ಲಿ ಕಾರು ಕೊಚ್ಚಿ ಹೋಗಿದೆ. ದೇವನಹಳ್ಳಿ ತಾಲೂಕಿನ ನಾಗಾರ್ಜುನಾ ಕಾಲೇಜು ಸಮೀಪದ ಅಂಡರ್ ಪಾಸ್‌ನಲ್ಲಿ ಒಂದು ಮಾರುತಿ ಆಸ್ಟರ್ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಮತ್ತೊಂದು ಕಾರು ದಡದಲ್ಲಿ ಸಿಲುಕಿಕೊಂಡಿದೆ.
ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ್ದು. ಕಾರು ಮಾಲೀಕರು ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇವನಹಳ್ಳಿ- ಚಿಕ್ಕಬಳ್ಳಾಪುರ ಗಡಿಯಲ್ಲಿ ಹರಿದು ಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ.