ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ ತಿಂಗಳು ಈ ಬಾರಿ ಸಿನಿರಸಿಕರಿಗೆ ಭರ್ಜರಿ ಹಬ್ಬದಂತೆ ಭಾಸವಾಗಲಿದೆ. ಎರಡು ದಶಕಗಳ ಹಿಂದೆ ಪ್ರೇಕ್ಷಕರ ಮನ ಗೆದ್ದಿದ್ದ ಕೆಲವು love ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿವೆ. ಶಾರುಖ್ ಖಾನ್ ಅಭಿನಯದ ದೇವದಾಸ್, ಸಲ್ಮಾನ್ ಖಾನ್ ಅಭಿನಯದ ತೇರೆ ನಾಮ್ ಹಾಗೂ ಮಣಿರತ್ನಂ ನಿರ್ದೇಶನದ ಯುವಾ ಮರು-ಬಿಡುಗಡೆಯಾಗಲಿರುವ ಪ್ರಮುಖ ಚಿತ್ರಗಳಾಗಿವೆ.
ಪಿವಿಆರ್ ಸಿನಿಮಾಸ್ ಈ ರಿ-ರಿಲೀಸ್ ಯೋಜನೆಯನ್ನು ಘೋಷಿಸಿದ್ದು, ದೊಡ್ಡ ಪರದೆಯಲ್ಲಿ ಪ್ರೀತಿಯ ವಿಭಿನ್ನ ಆಯಾಮಗಳನ್ನು ಮತ್ತೆ ಸಂಭ್ರಮಿಸುವ ಉದ್ದೇಶವಿದೆ ಎಂದು ತಿಳಿಸಿದೆ. ಈ ಪೈಕಿ ಮೊದಲನೆಯದಾಗಿ ದೇವದಾಸ್ ಫೆಬ್ರವರಿ 6ರಂದು ಥಿಯೇಟರ್‌ಗಳಿಗೆ ಮರಳಲಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಪ್ರಸಿದ್ಧ ಕಾದಂಬರಿಯ ಆಧಾರಿತವಾಗಿದ್ದು, ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರ ಅಭಿನಯಕ್ಕೆ ಅಪಾರ ಪ್ರಶಂಸೆ ಗಳಿಸಿತ್ತು.
ಇದನ್ನೂ ಓದಿ:
ಮಣಿರತ್ನಂ ಅವರ ಯುವಾ ಫೆಬ್ರವರಿ 20ರಂದು ಮರುಬಿಡುಗಡೆಯಾಗಲಿದ್ದು, ಸಮಾಜದ ವಿಭಿನ್ನ ಹಂತದ ಮೂವರು ಯುವಕರ ಕಥೆಯನ್ನು ಹೇಳುತ್ತದೆ. ಇದರಲ್ಲಿ ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ವಿವೇಕ್ ಒಬೆರಾಯ್ ಸೇರಿದಂತೆ ಅನೇಕ ತಾರಾಗಣವಿದೆ. ಫೆಬ್ರವರಿ 27ರಂದು ಸಲ್ಮಾನ್ ಖಾನ್ ಅಭಿನಯದ ತೇರೆ ನಾಮ್ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರವು ಸಲ್ಮಾನ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ತಂದ ಸಿನಿಮಾ ಎನ್ನಲಾಗುತ್ತದೆ.
ಒಟ್ಟಿನಲ್ಲಿ, ಈ ಫೆಬ್ರವರಿಯಲ್ಲಿ ಹಳೆಯ ಪ್ರೇಮ ಕಥೆಗಳು ಹೊಸ ತಲೆಮಾರಿಗೂ ಮತ್ತೆ ಥಿಯೇಟರ್ ಅನುಭವ ನೀಡಲು ಸಜ್ಜಾಗಿವೆ.



