ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ರಾಜ್ಯದಲ್ಲಿ ಅತಿವೃಷ್ಟಿ, ಭೂಕುಸಿತ ಸಂಭವಿಸುತ್ತಿದ್ದರೆ ಮತ್ತೊಂದೆಡೆ ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿ ಪರಿಣಮಿಸಿದ್ದು, ಗದ್ದುಗೆ ಖಾತ್ರಿ ಮಾಡಿಕೊಳ್ಳುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳಿಗೆ ಉಪಹಾರ ಏರ್ಪಡಿಸಿ ಮುಂದಿನ ಕ್ರಮ ಹಾಗೂ ಕಾನೂನು ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದರು. ಇದೇ ವಿಷಯವನ್ನು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಇಂದು ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದಲ್ಲಿನ ಭೂ ಕುಸಿತ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಯೋಚನೆ ವಿಚಾರ ಹೋಲಿಕೆ ಮಾಡಿ ಬಿಜೆಪಿ ಟಾಂಗ್ ನೀಡಿದೆ. ಸಿದ್ದರಾಮಯ್ಯನವರಿಗೆ ಭೂ ಕುಸಿತಕ್ಕಿಂತ ಕುರ್ಚಿ ಕುಸಿತದ ಬಗ್ಗೆ ಹೆಚ್ಚು ಚಿಂತೆ!! ಎಂದು ಟ್ವಿಟ್ ಮೂಲಕ ವ್ಯಂಗ್ಯವಾಡಿದೆ.