ತೈಲ ಬೆಲೆ ಏರಿಕೆಗೆ ರಾಜ್ಯಾದ್ಯಂತ ಪ್ರತಿಭಟನೆ, ಅಭಿವೃದ್ಧಿಗಾಗಿಯೇ ರೇಟ್‌ ಜಾಸ್ತಿ ಮಾಡಿದಿವಿ ಎಂದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಸಮಜಾಯಷಿ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕಾಗಿ ಮಾಡಲಾಗಿದೆ  ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ‌ ರೂ.3 ಹೆಚ್ಚಳ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ನಮ್ಮ ಅಕ್ಕ-ಪಕ್ಕದ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಿದೆ, ನಮ್ಮಲ್ಲಿ ಅಲ್ಲಿಗಿಂತ ದರ ಕಡಿಮೆ ಇದೆ ಎಂಂದು ಹೇಳಿದರು.

ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತೈಲ ಬೆಲೆ ಇಲ್ಲಿಗಿಂತ ಅಧಿಕವಾಗಿದೆ. ಆದರೂ, ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧದ ಬದಲು ಬಿಜೆಪಿಯವರು ಕೇಂದ್ರದ ವಿರುದ್ಧ ಧರಣಿ ಮಾಡಬೇಕು ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನಿಮ್ಮ ತರ ಸಿಎಂ ಇದ್ರೆ ಸಾಮಾನ್ಯ ಜನ್ರು ಮನ್ನು ತಿನ್ನೋದು ಗ್ಯಾರಂಟಿ. ಏನು ಅಭಿವೃದ್ದಿ ಗೆ ಜಾಸ್ತಿ ಮಾಡಿರೋದು. ನಿಮ್ಮನ್ನು ಫ್ರೀ ಗ್ಯಾರಂಟಿ ಯೋಜನೆ ಗಳನ್ನು ಜನ್ರು ಕೇಳಿದ್ರಾ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾಡಿ. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಕಷ್ಟ ದಲ್ಲಿ ಸಿಕ್ಕಿಸಿ ದ್ದೀರಾ.
    ನೀವು ಸರಕಾರಿ ನೌಕರ ರಿಗೆ ಮಾಡೋ ವೇತನ ಆಯೋಗ ಗಳನ್ನೂ ಕಮ್ಮಿ ಮಾಡಿ.
    ರಾಜಕೀಯ ಸಭೆ ಗೆ ಖರ್ಚು ಮಾಡೋ ಹಣವನ್ನು ಕಮ್ಮಿ ಮಾಡಿ.
    ಮಂತ್ರಿ ಗಳು , ಐಎಎಸ್ ಐಪಿಎಸ್ ಅಧಿಕಾರಿ ಗಳ ಬಳಿ ಇರೋ ಕಪ್ಪು ಹಣ ವನ್ನೂ ತಗೊಳಿ. ಅವೆಲ್ಲ ಹಾಗಲ್ಲ. ಅದರ ಬದಲು ಈ ರೀತಿ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡೋದೋ ಮಾತ್ರ ನಿಮ್ಮ ಸರಕಾರಕ್ಕೆ ಗೊತ್ತಾ.

LEAVE A REPLY

Please enter your comment!
Please enter your name here

error: Content is protected !!