ಅಧಿವೇಶನದಲ್ಲಿ ಜಾರ್ಜ್-ಯತ್ನಾಳ್ ಮದ್ಯೆ ಮಾತಿನ ಜಟಾಪಟಿ: ಏಕವಚನದಲ್ಲೇ ಟೀಕಾ ಪ್ರಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಧಿವೇಶನದಲ್ಲಿ ಇಂದು ಇಂಧನ ಸಚಿವ ಕೆಜೆ ಜಾರ್ಜ್ ಹಾಗು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮದ್ಯೆ ಜಟಾಪಟಿ ನಡೆದಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿದ್ಯುತ್ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಜಾರ್ಜ್ (KJ George) ಆಕ್ಷೇಪ ವ್ಯಕ್ತಪಡಿಸಿದ್ದು, ಆ ಕ್ಷಣ ಮಧ್ಯಪ್ರವೇಶಿಸಿದ ಯತ್ನಾಳ್ ಜಾರ್ಜ್ ವಿರುದ್ಧ ಯತ್ನಾಳ್ ಏಕವಚನದಲ್ಲೇ ಪ್ರಹಾರ ನಡೆಸಿದರು.

ವಿದ್ಯುತ್​ ದರ ಹೆಚ್ಚಳ ಕುರಿತು ಸದನದಲ್ಲಿ ಬೊಮ್ಮಾಯಿ ಪ್ರಸ್ತಾಪ ಮಾಡಿದಾಗ ಆಕ್ಷೇಪ ವ್ಯಕ್ತಪಡಿಸಿದ ಕೆಜೆ ಜಾರ್ಜ್, ನಿಮ್ಮ ಅವಧಿಯಲ್ಲಿ ವಿದ್ಯುತ್​ ದರ ಏರಿಕೆ ಆಗಿದ್ದು ಅಂತ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್​ಗೆ ನಿಮಗೆ ಗೊತ್ತಿಲ್ಲ ಕುಳಿತುಕೊಳ್ಳಿ ಎಂದು ಕೆ.ಜೆ.ಜಾರ್ಜ್ ಹೇಳಿದರು.ಇದರಿಂದ ಕೆರಳಿದ ಯತ್ನಾಳ್ ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ನೀನೇನು ಸರ್ವಜ್ಞನಾ, ಕುಳಿತುಕೊಳ್ಳಲು ಹೇಳಲು ನೀನ್ಯಾರು? ಮಂತ್ರಿ ‌ಮಾಡು ಅಂತಾ ನಾನೇನು ನಿಮ್ಮ ಮನೆಗೆ ಬಂದಿದ್ದೇನ ಎಂದು ಹರಿಹಾಯ್ದರು.

ವಿರೋಧ ಪಕ್ಷದ ನಾಯಕನಾಗಲು ಶಾಸಕ ಯತ್ನಾಳ್​ಗೆ ಆಸೆ ಇದೆ. ಹಾಗಾಗಿ ಪದೇಪದೆ ಎದ್ದು ಯತ್ನಾಳ್​ ಮಾತನಾಡುತ್ತಿದ್ದಾರೆ. ಎಷ್ಟೇ ಬಾಯಿ ಬಡಿದುಕೊಂಡರೂ ವಿಪಕ್ಷ ನಾಯಕರನ್ನಾಗಿ ಮಾಡಲ್ಲ ಎಂದು ಹೇಳುವ ಮೂಲಕ ಜಾರ್ಜ್ ಮಾತಿನಲ್ಲೇ ಯತ್ನಾಳ್​ ಅವರ ಕಾಲೆಳೆದರು. ಇದಕ್ಕೆ ಪ್ರತ್ಯುತ್ತರ ನೀಡಿದ ಯತ್ನಾಳ್, ನಾನು ಯಾವ ಹುದ್ದೆಗೂ ಆಸೆ ಪಡಲ್ಲ, ಆಸೆ ಪಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!