ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ನಾಲ್ಕು ದಿನಗಳಲ್ಲಿ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಸಿನಿಮಾದ ಹವಾ ಭಾರತದಲ್ಲಿ ಬಲು ಜೋರಾಗಿ ಹರಡಿದೆ.
ಇದ್ರ ಜೊತೆಗೆ ರಜನಿಕಾಂತ್ ಅಬ್ಬರ ಹೊರದೇಶಗಳಲ್ಲಿಯೂ ಬಲು ಜೋರಾಗಿದೆ. ಸಿಂಗಾಪುರದಂತಹ, ಅತಿಯಾದ ಸಿನಿಮಾ ಕ್ರೇಜ್ ಇಲ್ಲದ ದೇಶಗಳಲ್ಲಿಯೂ ಹವಾ ಎಬ್ಬಿಸಿದೆ.
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದ ಹಾಡೊಂದಕ್ಕೆ ಸಿಂಗಾಪುರದ ಪೊಲೀಸರು ರೀಲ್ಸ್ ಮಾಡಿದ್ದಾರೆ.
ಸಿಂಗಾಪುರ ಪೊಲೀಸರು ‘ಕೂಲಿ’ ಸಿನಿಮಾದ ಮಾಸ್ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡು ಸ್ಲೋ ಮೋಷನ್ನಲ್ಲಿ ತಮ್ಮ ಪೊಲೀಸ್ ಪಡೆಯ ವಿವಿಧ ವಿಭಾಗಗಳನ್ನು ತೋರಿಸುವ ವಿಡಿಯೋ ಒಂದನ್ನು ಮಾಡಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಜನಿಕಾಂತ್ ಜೊತೆಗೆ ಆಮಿರ್ ಖಾನ್, ಉಪೇಂದ್ರ, ವಿಲನ್ ಪಾತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ, ಸೋಬಿನ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.