ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಮೂಡಬಿದಿದ್ರೆಯ ಆಳ್ವಾಸ್ ಅಂಗಣದಲ್ಲಿ ನಾಲ್ಕು ದಿನಗಳ ಕಾಲ ‘ಆಳ್ವಾಸ್ ವಿರಾಸತ್’ ಸಂಭ್ರಮ. ಕಲಾ ರಸಿಕರ ಮನಸೂರೆಗೊಳ್ಳುವ ಈ ಕಾರ್ಯಕ್ರಮಕ್ಕೆ ರಾಜ್ಯ ಮಾತ್ರವಲ್ಲ, ದೇಶದ ವಿವಿಧೆಡೆಯಿಂದ ಕಲಾ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಆಳ್ವಾಸ್ ಎಂಬ ಶಿಕ್ಷಣ ಕಾಶಿಯಲ್ಲಿ ಇನ್ನು ನಾಲ್ಕು ದಿನಗಳ ಕಾಲ ಸಂಗೀತದ ರಸದೌತಣವೂ ದೊರೆಯಲಿದೆ. ಬರುವ ಮಂದಿಯನ್ನು ಅಚ್ಚರಿ ಗೊಳಿಸುವ ತೆರದಿ ಇಲ್ಲಿ ಕಾರ್ಯಕ್ರಮದ ಸಿದ್ಧತೆ ಯಶಸ್ವಿಯಾಗಿ ನಡೆದಿದೆ.
ಡಾ. ಮೋಹನ ಆಳ್ವರು ಕಾರ್‍ಯಕ್ರಮವೊಂದನ್ನು ಆಯೋಜಿಸಿದರೆಂದರೆ ಅಲ್ಲೊಂದು ಅದ್ಭುತ ಸೃಷ್ಟಿಯಾಯಿತೆಂದೇ ಅರ್ಥ. ಅದು ಆಳ್ವಾಸ್ ನುಡಿಸಿರಿ ಇರಲಿ, ವಿರಾಸತ್ ಇರಲಿ ಅಥವಾ ಕ್ರೀಡಾಕೂಟವಿರಲಿ. ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ಮತ್ತು ನಿಗದಿತ ಸಮಯದಲ್ಲಿ ನಡೆಯುವಂತೆ ಆದ್ಯತೆ ನೀಡಲಾಗುತ್ತದೆ.