ಆರ್ಮೇನಿಯಾಗೆ ದೇಶಕ್ಕೆ ಸಿಕ್ಕಿತು ಮತ್ತಷ್ಟು ಬಲ: ಭಾರತದಿಂದ ಮೇಡ್ ಇನ್ ಇಂಡಿಯಾ ಗನ್​ಗಳ ರಫ್ತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ತಯಾರಿಸಲಾಗುತ್ತಿರುವ ಆರ್ಟಿಲರಿ ಗನ್ ಸಿಸ್ಟಂ ಅನ್ನು ಆರ್ಮೇನಿಯಾ ದೇಶ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಎಲ್ ಅಂಡ್ ಟಿ ಹಾಗೂ ಫ್ರಾನ್ಸ್​ನ ಕೆಎನ್​ಡಿಎಸ್ ಸಂಸ್ಥೆಗಳು ಜಂಟಿಯಾಗಿ ಭಾರತದಲ್ಲಿ ಈ ಗನ್​ಗಳನ್ನು ತಯಾರಿಸುತ್ತಿವೆ

ಫ್ರೆಂಚ್ ಕಂಪನಿಯ ಸಹಯೋಗದೊಂದಿಗೆ ಎಲ್ ಅಂಡ್ ಟಿ ತಯಾರಿಸಿರುವ ಈ ಗನ್​ನ ಆಕ್ಸಿಲಿಯರಿ ಪವರ್ ಯುನಿಟ್, ಕಂಟ್ರೋಲ್ ಪೆನಲ್, ರೋಲಿಂಗ್ ಗೇರ್ ಅಸೆಂಬ್ಲಿ ಇತ್ಯಾದಿ ಸಬ್​ಸಿಸ್ಟಂಗಳೆಲ್ಲವನ್ನೂ ಭಾರತದಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವುದು ವಿಶೇಷ.

ಪಕ್ಕದ ಅಜರ್​ಬೈಜಾನ್​ನೊಂದಿಗೆ ತಿಕ್ಕಾಟದಲ್ಲಿರುವ ಆರ್ಮೇನಿಯಾ ದೇಶ ಭಾರತದಿಂದ ಸಾಕಷ್ಟು ಮಿಲಿಟರಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್​ಗಳು, ಆರ್ಟಿಲರಿ ಗನ್​ಗಳು, ಸಾಕಷ್ಟು ಮದ್ದುಗುಂಡುಗಳು ಮೊದಲಾದವನ್ನು ಭಾರತದಿಂದ ಆರ್ಮೇನಿಯಾಗೆ ಸರಬರಾಜು ಮಾಡಲಾಗಿದೆ. ಪಿನಾಕಾ ರಾಕೆಟ್ ಲಾಂಚರ್ ಅನ್ನು ಈಗಾಗಲೇ ಆರ್ಮೇನಿಯಾ ಸೇನೆಯಲ್ಲಿ ನಿಯೋಜಿಸಲಾಗಿದೆ. ಆರ್ಟಿಲರಿ ಗನ್ ಸಿಸ್ಟಂಗಳೂ ಕೂಡ ಅಳವಡಿಕೆ ಆಗಿವೆ.

ಭಾರತದ ನೌಕಾ ಪಡೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮಧ್ಯಮ ಶ್ರೇಣಿ ಸರ್ಫೇಸ್ ಟು ಏರ್ ಮಿಸೈಲ್​ಗಳನ್ನು ಪಡೆಯಲು ನಿಶ್ಚಯಿಸಿದೆ. ಈ ಸಂಬಂಧ ಭಾರತ್ ಡೈನಾಮಿಕ್ಸ್ ಲಿ ಎಂಬ ಕಂಪನಿಯೊಂದಿಗೆ 2,960 ಕೋಟಿ ರೂ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.

MRSAM ಕ್ಷಿಪಣಿಗಳು ನೌಕಾಪಡೆಯ ಬತ್ತಳಿಕೆಯಲ್ಲಿ ಪ್ರಬಲ ಅಸ್ತ್ರಗಳೆನಿಸಲಿವೆ. ನೆಲದಿಂದ ಆಗಸಕ್ಕೆ ಚಿಮ್ಮಿ ಹೋಗುವ ಈ ಕ್ಷಿಪಣಿಗಳು (MRSAM) ಶತ್ರುಗಳ ಫೈಟರ್ ಜೆಟ್​ಗಳು, ಕ್ಷಿಪಣಿಗಳು ಮತ್ತು ಡ್ರೋನ್​ಗಳ ದಾಳಿಗಳನ್ನು ಎದುರಿಸಲು ಸಮರ್ಥವಾಗಿವೆ. ಮುಂಬರುವ ದಿನಗಳಲ್ಲಿ ಇಂಥ ಕ್ಷಿಪಣಿಗಳ ಬಳಕೆಯನ್ನು ಭಾರತೀಯ ನೌಕಾ ಪಡೆ ಹೆಚ್ಚಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!