ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೇಶ್ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತೃಣಮೂಲ ಕಾಂಗ್ರೆಸ್ ಮತ್ತು ಇತರ ಮೈತ್ರಿ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ (West Bengal) ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ (Narendra Modi)ಹೂಗ್ಲಿ ಜಿಲ್ಲೆಯ ಅರಾಂಬಾಗ್ ಪ್ರದೇಶದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ರಾಜಾ ರಾಮ್ ಮೋಹನ್ ರಾಯ್ (Raja Ram Mohan Roy) ಅವರ ಆತ್ಮವು ಅಳುತ್ತಿತ್ತು ಎಂದು ಹೇಳಿದ್ದಾರೆ.
ಇಡೀ ದೇಶ ಬಂಗಾಳದ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಟಿಎಂಸಿ ನಾಯಕನ ಮತ್ತು ಕಾರ್ಯಕರ್ತರು ಸಂದೇಶಖಾಲಿ ಸಹೋದರಿಯರ ಮೇಲೆ ಮಾಡಿರುವ ದೌರ್ಜನ್ಯ ತಿಳಿದು ಎಂದು ಇಡೀ ದೇಶವೇ ದುಃಖಿಸಿದೆ ಎಂದರು.
ಸಂದೇಶಖಾಲಿ ಸಹೋದರಿಯರೊಂದಿಗೆ ಟಿಎಂಸಿ ಏನು ಮಾಡಿದೆ ಎಂದು ದೇಶ ನೋಡುತ್ತಿದೆ, ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಮಹಿಳೆಯರ ಮೇಲಿನ ಶೋಷಣೆ ಕಂಡು ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮ ಇದನ್ನೆಲ್ಲಾ ನೋಡಿ ಎಷ್ಟು ರೋದಿಸಿರಬೇಕು. ಸಂದೇಶಖಾಲಿಯಲ್ಲಿ ಟಿಎಂಸಿ ನಾಯಕ ಮಿತಿ ಮೀರಿ ವರ್ತಿಸಿದ್ದಾನೆ. ಇಂತಹವರನ್ನೆಲ್ಲಾ ನಾವು ಸುಮ್ಮನೆ ಬಿಡುವುದಿಲ್ಲ, ಇದಕ್ಕೆಲ್ಲಾ ತಕ್ಕ ಸಾಸ್ತಿ ಮಾಡುತ್ತೇವೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಇಡೀ ದೇಶವೇ ಆಘಾತಕ್ಕೆ ಒಳಗಾಗಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ, ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸತತ ಒತ್ತಡ ಏರಿದ್ದರಿಂದ ಆರೋಪಿ ಶೇಖ್ ಶಹಜಹಾನ್ನನ್ನ ಬಂಧಿಸಲಾಗಿದೆ. ಟಿಎಂಸಿ ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಿತ್ತು ಎಂದು ಆರೋಪಿಸಿದ್ದಾರೆ.
ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಸಂಕಟಕ್ಕಿಂತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೆಲವು ಜನರ ಮತಗಳು ಮುಖ್ಯವೇ ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಮುಸ್ಲಿಂ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಈ ಘಟನೆಯನ್ನು ಖಂಡಿಸಿದ I.N.D.I.A ಮೈತ್ರಿಕೂಟದ ನಾಯಕರ ಮೌನ ವಹಿಸಿದ್ದಾರೆ ಎಂದು ಕಿಡಿ ಕಾರಿದರು.