ಹೊಸ ದಿಗಂತ ವರದಿ, ಅಂಕೋಲಾ:
ತಾಲೂಕಿನ ಹೊಸಕಂಬಿಯಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಸೋಮವಾರ ಮದ್ಯಾಹ್ನ ಹೊಸಕಂಬಿ ಸೇತುವೆ ಕೆಳಗೆ ಪತ್ತೆಯಾಗಿದೆ.
ತಾಲೂಕಿನ ಬೊಬ್ರವಾಡ ನಿವಾಸಿ ಸುಹಾಸ ಪಾಂಡುರಂಗ ನಾಯ್ಕ (30) ಎಂಬಾತ ರವಿವಾರ ಸ್ನೇಹಿತರ ಜೊತೆ ಪಿಕನಿಕ್ ಗೆ ತೆರಳಿದ ಸಂದರ್ಭದಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧನಾ ಕಾರ್ಯ ನಡೆಸಿದರಾದರೂ ರವಿವಾರ ಯಾವುದೇ ಸುಳಿವು ದೊರಕಿರಲಿಲ್ಲ. ಸೋಮವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಮದ್ಯಾಹ್ನ ಹೊಸಕಂಬಿ ಸೇತುವೆ ಬಳಿ ಯುವಕನ ಮೃತ ದೇಹ ದೊರಕಿದೆ.
ಅಂಕೋಲಾ ತಹಶೀಲ್ಧಾರ ಅಶೋಕ ಭಟ್ಟ, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗಳು
ಮತ್ತು ಸ್ಥಳೀಯ ಜನರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.