ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ ಕೈ, ಕಾಲು ಕಟ್ಟಿಹಾಕಿದ ಸ್ಥಿತಿಯಲ್ಲಿ ವೈದ್ಯನ ಮೃತದೇಹ ಪತ್ತೆಯಾಗಿರುವ ಘಟನೆ ದೆಹಲಿಯ ಜಂಗ್ಪುರದಲ್ಲಿ ನಡೆದಿದೆ.
ವೈದ್ಯ ಡಾ.ಯೋಗೇಶ್ ಚಂದ್ರ ಪಾಲ್ (63) ಅವರ ದೇಹವು ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಂಗ್ಪುರ ಸಿ ಬ್ಲಾಕ್ನಲ್ಲಿರುವ ವಸತಿ ಕಟ್ಟಡದ ಮೊದಲ ಮಹಡಿಯಲ್ಲಿ ವೈದ್ಯ ಚಂದ್ರ ಪಾಲ್ ವಾಸವಾಗಿದ್ದರು. ಅವರ ಮನೆಯಲ್ಲಿ ದರೋಡೆಯಾಗಿರುವ ಬಗ್ಗೆ ಪೊಲೀಸರಿಗೆ ಕುರುಹು ಸಿಕ್ಕಿದೆ. ಆದರೆ ಸಂಪೂರ್ಣ ತನಿಖೆಯ ನಂತರ ಹೆಚ್ಚಿನ ಮಾಹಿತಿ ತಿಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇದು ದರೋಡೆಕೋರರ ಕೃತ್ಯವೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.