ಭೀಕರ ಸುಂಟರಗಾಳಿಗೆ ಅಮೆರಿಕ ತತ್ತರ, ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ಸುಂಟರಗಾಳಿಗೆ ಅಮೆರಿಕ ತತ್ತರಿಸಿದ್ದು, ಸಾವಿನ ಸಂಖ್ಯೆ ೩೨ಕ್ಕೆ ಏರಿಕೆಯಾಗಿದೆ.
ಏಕಾಏಕಿ ಹವಾಮಾನ ಬದಲಾವಣೆಯಿಂದಾಗಿ ಶುಕ್ರವಾರದಿಂದ ಶನಿವಾರದವರೆಗೂ ಅಮೆರಿಕದ ದಕ್ಷಿಣ, ಮಧ್ಯಮ ಭಾಗಗಳಲ್ಲಿ ಚಂಡಮಾರುತ ಬೀಸಿದ್ದು, ಕ್ಷಣಮಾತ್ರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.

ಸುಂಟರಗಾಳಿಯ ಹೊಡೆತಕ್ಕೆ ೩೨ ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು, ಮನೆಗಳ ಮೇಲೆ ಭಾರೀ ಗಾತ್ರದ ಮರಗಳು ಉರುಳಿವೆ.

ಸರ್ಕಾರ ಪರಿಹಾರ ಹಾಗೂ ರಕ್ಷಣಾ ಕಾರ್ಯ ಆರಂಭಿಸಿದ್ದು, ಮನೆಗಳ ಮೇಲೆ ಬಿದ್ದ ಮರಗಳ ತೆರವು ಕಾರ್ಯ ನಡೆಯುತ್ತಿದೆ. ಅಮೆರಿಕದ ಹವಾಮಾನ ಇಲಾಖೆ ಮಾಹಿತಿ ಅನ್ವಯ ಶುಕ್ರವಾರ ಹಾಗೂ ಶನಿವಾರ ದಕ್ಷಿಣ ಹಾಗೂ ಮಧ್ಯಪಶ್ಚಿಮ ಭಾಗದಲ್ಲಿ 60 ಕ್ಕೂ ಹೆಚ್ಚು ಕಡೆ ಸುಂಟರಗಾಳಿ ಅಪ್ಪಳಿಸಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!