ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 4,000ಕ್ಕೆ ಏರಿಕೆಯಾಗಿದೆ.
ಬದುಕುಳಿದವರಿಗಾಗಿ ನೆಲವನ್ನು ಅಗೆಯುತ್ತಿರುವಾಗಲೇ ಇನ್ನಷ್ಟು ಕಟ್ಟಡಗಳು ಧರೆಗುರುಳಿದ್ದು, ಮತ್ತಷ್ಟು ಮಂದಿ ಮೃತಪಟ್ಟಿದ್ದಾರೆ. ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಹೆಚ್ಚಿನ ಮಂದಿ ನಿದ್ದೆಯಲ್ಲಿದ್ದರು. ನಿದ್ದೆಯಲ್ಲಿದ್ದ ಕಾರಣ ಸಾವು ನೋವು ಹೆಚ್ಚಾಗಿದೆ.
5,600 ಮಂದಿ ತುಂಬಿರುವ ಅಪಾರ್ಟ್‌ಮೆಂಟ್ ಧರೆಗೆ ಉರುಳಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 1999ರಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 17 ಸಾವಿರ ಮಂದಿ ಮೃತಪಟ್ಟಿದ್ದರು.