ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಖಚಿತ, ಎನ್ ಡಿಎ ಅಭ್ಯರ್ಥಿ ನಿಖಿಲ್ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರದಿಂದಲೇ ಕಾಂಗ್ರೆಸ್ ಅವನತಿ ಆರಂಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣದಿಂದಲೇ ಕಾಂಗ್ರೆಸ್ ಅವನತಿ ಆರಂಭವಾಗಲಿದೆ. ಹಾಸನಾಂಬೆ ದರುಶನ ಪಡೆದು ಈ ಮಾತು ಹೇಳುತ್ತಿದ್ದೇನೆ ಬರೆದಿಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ನನ್ನ ಮಗನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನವರು ಕುತಂತ್ರ ನಡೆಸಿದ್ದಾರೆ. ಎರಡು ಬಾರಿ ಸೋತರೇನು ಅದೇ ಚನ್ನಪಟ್ಟಣದ ಕ್ಷೇತ್ರದಿಂದ ನಿಖಿಲ್ ಗೆದ್ದು ಬರಲಿದ್ದಾರೆ. ಕಾಂಗ್ರೆಸ್ ನವರು ಏನೇ ಕುತಂತ್ರ ಮಾಡಿದರೂ ಜನ ನಿಖಿಲ್ ಅವರನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.