ಸರ್ವಾಧಿಕಾರಿ ನಡೆಗೆ ತಾವೇ ಬೆಲೆತೆರಬೇಕಾಗುತ್ತದೆ: ಜೋ ಬಿಡೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಇತಿಹಾಸದ ಉದ್ದಕ್ಕೂ ನಾವು ಯುದ್ಧಗಳನ್ನು ನೋಡಿದ್ದೇವೆ, ಸರ್ವಾಧಿಕಾರಿಗಳು ಆಕ್ರಮಣಶೀಲತೆಗೆ ಬೆಲೆ ಕೊಟ್ಟಾಗ ಅದು ಅವ್ಯವಸ್ಥೆಯನ್ನು ಮಾತ್ರ ಸೃಷ್ಟಿಸುತ್ತದೆ. ಇದಕ್ಕೆ ಅವರೇ ಬೆಲೆ ತೆತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಸ್ಟೇಟ್ ಆಫ್ ಯೂನಿಯನ್‌ನಲ್ಲಿ ಭಾಷಣ ಮಾಡಿರುವ ಬಿಡೆನ್ ಉಕ್ರೇನಿಯನ್ ರಕ್ಷಕರ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಕ್ರೇನಿಯನ್ ಮಿಲಿಟರಿಗೆ ಬಲ ತುಂಬಲು ಮತ್ತು ನಿರ್ಬಂಧಗಳ ಮೂಲಕ ರಷ್ಯಾದ ಆರ್ಥಿಕತೆ ದುರ್ಬಲಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ.

ಈ ರೀತಿ ಸರ್ವಾಧಿಕಾರ, ಆಕ್ರಮಣಾಕಾರಿ ನಡೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಈ ಯುದ್ಧದಲ್ಲಿ ಉಕ್ರೇನ್ ಜೊತೆ ಇದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!