ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನಾಗಚೈತನ್ಯ ಜೊತೆ ಡಿವೋರ್ಸ್ ಆದ ನಂತರ ಸಮಂತಾ ತಮ್ಮಪಾಡಿಗೆ ತಾವಿದ್ದರು. ಇತ್ತ ನಾಗಚೈತನ್ಯ ನಟಿ ಸೋಭಿತಾ ಧುಲಿಪಾಲ ಜೊತೆ ಮದುವೆಯಾದರು. ಸಮಂತಾ ಮಾತ್ರ ಸಿಂಗಲ್ ಆಗಿಯೇ ಇದ್ದಾರೆ ಎಂದು ಫ್ಯಾನ್ಸ್ ಬೇಸರದಲ್ಲಿ ಇದ್ದರು. ಆದರೆ ಇದೀಗ ಸಮಂತಾ ಕೂಡ ಮಿಂಗಲ್ ಆಗುವ ಸಾಧ್ಯತೆಯಲ್ಲಿದ್ದಾರೆ.
ಹೌದು, ಸೌತ್ ನಟಿ ಸಮಂತಾ ಎರಡನೇ ಮದುವೆಗೆ ಸಿದ್ಧವಾದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ನಿರ್ಮಾಪಕ ರಾಜ್ ನಿಡಿಮೋರು ಜೊತೆಗಿನ ಸಮಂತಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡುವಂತಹ ಮತ್ತೊಂದು ಫೋಟೋ ಭಾರೀ ಸದ್ದು ಮಾಡ್ತಿದೆ. ನಿರ್ಮಾಪಕನ ತೋಳಲ್ಲಿ ನಟಿ ತಲೆಯಿಟ್ಟು ಮಲಗಿದ್ದಾರೆ.
ಸಮಂತಾ ನಟನೆಯೊಂದಿಗೆ ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಶುಭಂ’ ಮೂಲಕ ನಟಿ ಗೆಲುವು ಸಾಧಿಸಿದ್ದಾರೆ. ನಟಿಯ ಪ್ರತಿ ಕೆಲಸದಲ್ಲೂ ನಿರ್ಮಾಪಕ ರಾಜ್ ಜೊತೆಯಾಗಿರೋದನ್ನು ನೋಡಿ ಅಭಿಮಾನಿಗಳು ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದಾರೆ.