ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆರಿಗೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇದೆಯೇ? ಅನುಭವೀ ವೈದ್ಯರಾ ಎಂದು ಜನ ಆಲೋಚಿಸುತ್ತಾರೆ. ಎಲ್ಲವೂ ಇರುವ ಆಸ್ಪತ್ರೆಯೊಂದರಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಲೈಟ್ ಇಲ್ಲದಿದ್ದು, ಟಾರ್ಚ್ ಬಳಸಿ ಹೆರಿಗೆ ಮಾಡಿಸಿದ ಪ್ರಕರಣ ನಡೆದಿದೆ.
ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿ ಮಾಡಿದ್ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಜಾರ್ಖಂಡ್‌ನ ಧನ್‌ಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಅಡ್ಮಿಟ್ ಆಗಿದ್ದು, ನೋವಿನಿಂದ ಒದ್ದಾಡುತ್ತಿದ್ದರು.
ಆದರೆ ಆಸ್ಪತ್ರೆಯ ಒಟಿಯಲ್ಲಿ ಲೈಟ್ ಇಲ್ಲ, ಲೈಟ್ ಇಲ್ಲದೆ ಹೆರಿಗೆ ಮಾಡಲು ಆಗದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಮನೆಯವರು ಹೇಗಾದರೂ ಮಾಡಿ ಮಗು ಹಾಗೂ ತಾಯಿಯನ್ನು ಉಳಿಸಿಕೊಡಿ ಎಂದು ಕುಟುಂಬದವರು ಬೇಡಿದ್ದಾರೆ. ಹಾಗಾಗಿ ಪಕ್ಕದ ಪಾನ್‌ಶಾಪ್‌ಗೆ ತೆರಳಿ ಅವರ ಬಳಿ ಇದ್ದ ಟಾರ್ಚ್ ಬಳಸಿ ಸಿಜೇರಿಯನ್ ಹೆರಿಗೆ ಮಾಡಿಸಿದ್ದಾರೆ. ಅದೃಷ್ಟವಶಾತ್ ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.
ಈ ವಿಷಯ ಹೊರಬರುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳು ಹಾಗೂ ಸಾರ್ವಜನಿಕರು ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಅಕಸ್ಮಾತ್ ಜೀವಕ್ಕೆ ತೊಂದರೆ ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಕೆಲ ಸಮಯದಿಂದ ಲೈಟ್ ಕೆಲಸ ಮಾಡುತ್ತಿಲ್ಲ ಎಂದು ತಿಳಿದಿದ್ದರೂ ಲೈಟ್ ಸರಿಪಡಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಆಸ್ಪತ್ರೆ ಮಾತ್ರ ಕೇವಲ ಟಾರ್ಚ್ ಲೈಟ್‌ನಿಂದ ಹೆರಿಗೆ ಮಾಡಿಸಿ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.