ಹೊಸದಿಗಂತವರದಿ,ಯಲ್ಲಾಪುರ :
ತಾಲೂಕಿನ ಮಾಗೋಡ, ಕಪ್ಪೆಗದ್ದೆ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-೬೩ರಲ್ಲಿ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ಕಾರು ಚಾಲಕನು ಗಾಯಗೊಂಡ ಘಟನೆ ನಡೆದಿದೆ.
ಆರೋಪಿ ಕಾರು ಚಾಲಕ ತುಮಕೂರು ಜಿಲ್ಲೆಯ ಗೊಳರು ನಿವಾಸಿ ಕಾಂತರಾಜ ಜಗದೀಶ (೨೩) ಎಂಬಾತನು ತನ್ನ ಕಾರನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಹೋಗಿ, ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಈ ಘಟನೆಯಲ್ಲಿ ಕಾರು ಚಾಲಕ ಕಾಂತರಾಜನ ಎದೆ, ಮೈ-ಕೈಗೆ ಗಾಯವಾಗಿದ್ದು, ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.