ಹೊಸದಿಗಂತ ವರದಿ, ವಿಜಯಪುರ:
ಕೂಡಗಿ ಎನ್ ಟಿ ಪಿಸಿಯ ಬೂದಿ ತುಂಬಿಕೊಂಡು ಹೋಗಲು ಬಂದಿದ್ದ ಬಲ್ಕರ್ ವಾಹನದ ಚಾಲಕ ವಿದ್ಯುತ್ ಮೇನ್ ಲೈನ್ ತಗುಲಿ ಮೃತಪಟ್ಟಿರುವ ಘಟನೆ ಉಷ್ಣ ವಿದ್ಯುತ್ ಸ್ಥಾವರದ ಬಳಿಯ ಎಚ್ ಪಿ ಪೆಟ್ರೋಲ್ ಪಂಪ್ ಹತ್ತಿರ ಶನಿವಾರ ನಡೆದಿದೆ.
ಸಿಂದಗಿ ತಾಲೂಕಿನ ಕೋರವಾರ ಸಮೀಪದ ಮಲ್ಲಾಳ ತಾಂಡಾ ಎಲ್ ಟಿಯ ವಿಶ್ವನಾಥ ಶೇವು ರಾಠೋಡ (24) ಮೃತ ಚಾಲಕ.
ವಿಶ್ವನಾಥ ರಾಠೋಡ ಎಂಬ ಚಾಲಕ ವಾಹನದ ಮೇಲೆ ಹತ್ತಿದ ಸಂದರ್ಭದಲ್ಲಿ ಮೇನ್ ಲೈನ್ ತಾಗಿದೆ. ಸ್ಥಳಕ್ಕೆ ಕೂಡಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.